ಕೋಟ : ಇಲ್ಲಿನ ಮಣೂರು ಹೇರಂಬ ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಸಂಪನ್ನಗೊAಡಿತು. ಇದರ ಅಂಗವಾಗಿ ವಿವಿಧ ಧಾರ್ಮಿಕಗಳು ಜರಗಿದವು. ಧಾರ್ಮಿಕ ವಿಧಿವಿಧಾನವನ್ನು ವೇ.ಮೂ.ಗಿರಿಕೆಮಠ ಶ್ರೀರಾಮ ಅಡಿಗ ನೇತೃತ್ವದಲ್ಲಿ ಜರಗಿತು. ದೇಗುಲದ ಸುತ್ತಲು ಹಣತೆಯ ಸಾಲನ್ನಿಟ್ಟು ಭಕ್ತಾಧಿಗಳು ಜ್ಯೋತಿ ಬೆಳಗಿದರು
ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಮಾಜಿ ಅಧ್ಯಕ್ಷ ರಾಧಕೃಷ್ಣ ಉರಾಳ್,ಟ್ರಸ್ಟಿಗಳಾದ ಅಶೋಕ್ ಶೆಟ್ಟಿ ಕೊಯ್ಕೂರು,ದಿವ್ಯ ಪ್ರಭು,ಸುಫಲ ಶೆಟ್ಟಿ, ರವಿ ಐತಾಳ್,ದಿನೇಶ್ ಆಚಾರ್,ಅಚ್ಯುತ ಹಂದೆ,ಕೃಷ್ಣ ದೇವಾಡಿಗ,ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಅರುಣಾಚಲ ಮಯ್ಯ,ಎಂ.ಎನ್ ಮಧ್ಯಸ್ಥ,ಶಿವರಾಮ್ ಶೆಟ್ಟಿ,ವಿಷ್ಣುಮೂರ್ತಿ ಮಯ್ಯ,ಗೋಪಾಲ್ ಪೈ,ಮಹೇಶ್ ಹೊಳ್ಳ,ಸ್ನೇಹಕೂಟದ ಭಾರತಿ ವಿ ಮಯ್ಯ,ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷೆ ಚಂದ್ರಿಕಾ ಭಟ್ ಮತ್ತಿತರರು.