ಕುಂದಾಪುರ : ತೆಕ್ಕಟ್ಟೆ ಸಮೀಪದ ಕನ್ನುಕೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಆದಿತ್ಯವಾರ ರಾತ್ರಿ 10.00 ಗಂಟೆಯ ವೇಳೆಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿಯೊಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಮೃತಪಟ್ಟ ವ್ಯಕ್ತಿ ಕುಂಭಾಸಿ ಕೊರಗ ಕಾಲೋನಿಯಾದ ಆನಂದ ಎಂದು ತಿಳಿದು ಬಂದಿದೆ
ಆನಂದ ಅವರು ರಾತ್ರಿ ವೇಳೆ ಎಕಾಏಕಿ ರಸ್ತೆ ದಾಟುತ್ತಿದ್ದಾಗ ಕುಂದಾಪುರದಿಂದ ಉಡುಪಿ ಕಡೆ ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಆನಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಕೋಟ ಪೊಲೀಸ್ ಠಾಣಾ ಎಸ್ಐ ಸುಧಾ ಪ್ರಭು ಹಾಗೂ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿನೆ ನೆಡಸಿ ಮೃತದೇಹವನ್ನು ಕುಂದಾಪುರದ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ