ಕುಂದಾಪುರ : ಕೇಂದ್ರ ಸರಕಾರದ ಅನುದಾನದ ಅಡಿಯಲ್ಲಿ ಕುಂದಾಪುರ ನಗರದ ಸರಕಾರಿ ಆಸ್ಪತ್ರೆಯ ಸೆಟಲೈಟ್ ವಾಕ್ ಶ್ರವಣ ಕೇಂದ್ರದಲಿ 80 ವಾಕ್ ಶ್ರವಣ ಸಾಧನವನ್ನು ಉಚಿತವಾಗಿ ವಿತರಿಸಲಾಯತು
ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಕೇಂದ್ರ ನಿರ್ಧೇಶಕಿಯಾದ ಡಾ. ಪುಷ್ಪಾವತಿ ಮತ್ತು ಅವರ ತಂಡದ ಸಹಕಾರದೊಂದಿಗೆ 25 ಸಾವಿರ ಮೌಲ್ಯದ ವಾಕ್ ಶ್ರವಣ ಕಿಟ್‌ನ್ನು ಸುಮಾರು 80 ಮಂದಿಗೆ ಸೆಟಲೈಟ್ ಕೇಂದ್ರದಲ್ಲಿ ವಿತರಿಸಲಾಯಿತು
ಈ ಸಂದರ್ಭದಲ್ಲಿ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ವಾಕ್ ಶ್ರವಣ ಕೇಂದ್ರದ ಸ್ಥಾಪನೆಗಾಗಿ ಶ್ರಮಿಸಿ ತನ್ನ ಪತ್ನಿಯ ಹೆಸರಿನಲ್ಲಿ 22 ಲಕ್ಷಕ್ಕೂ ಮಿಕ್ಕಿ ಹಣವನ್ನು ದೇಣಿಗೆಯಾಗಿ ನೀಡಿದ ಕುಂದಾಪುರ ಪುರಸಭೆಯ ಮಾಜಿ ಸದಸ್ಯರಾದ ಶಿವರಾಮ್ ಪುತ್ರನ್‌ರವರು ಮುಖ್ಯ ಅತಿಥಿಯಾಗಿ ಆಗಮಿಸಿ ಫಲಾನುಭವಿಗಳಿಗೆ ವಾಕ್ ಶ್ರವಣದ ಉಪಕರಣಗಳನ್ನು ವಿತರಿಸಿದರು