ಕೋಟ : ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಮತ್ತು ಕನ್ನಡ ಜನಪದ ಪರಿಷತ್ ಕುಂದಾಪುರ ತಾಲೂಕು ಘಟಕ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ ಶಾಲಾ ವಿಭಾಗ) ಬಿದ್ಕಲ್ಕಟ್ಟೆ ,ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ -2024 ಜರುಗಿತು ಕಾರ್ಯಕ್ರಮ ಇತ್ತೀಚಿಗೆ ಬಿದ್ಕಲ್ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಇಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕ. ಜಾ .ಪ. ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಡಾ.ಗಣೇಶ್ ಗಂಗೊಳ್ಳಿ ಇವರು ನೆರವೇರಿಸಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಿಜಿಯವರ ಮಾರ್ಗದರ್ಶನದಲ್ಲಿ ಇಂತಹ ಕಾರ್ಯಕ್ರಮಗಳು ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕು ,ಗ್ರಾಮಗಳಲ್ಲಿ ನಡೆಯುತ್ತಿದೆ ಇಂತಹ ಕಲೆಗಳ ಪ್ರೋತ್ಸಾಹ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ಅಧ್ಯಕ್ಷತೆಯನ್ನು ಇಲ್ಲಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಕರುಣಾಕರ ಶೆಟ್ಟಿ.ಎಂ ವಹಿಸಿ ಮಾತನಾಡಿ ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ಕನ್ನಡ ಜಾನಪದ ಸಂಸ್ಕöÈತಿ ನೆಲೆನಿಂತಿದೆ ಇಂತಹ ಕಲೆ ಸಂಸ್ಕöÈತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರಿಂದ ಆಗಬೇಕಿದೆ ಎಂದರು. ಈ ಸಂದರ್ಭದಲ್ಲಿ ೧೦ ನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇಕಡಾ ೯೯. ಅಂಕ ಪಡೆದ ವಿದ್ಯಾರ್ಥಿನಿಯರಾದ ಕುಮಾರಿ ಅಭಿಜ್ಞಾ , ಕುಮಾರಿ ಸಾನಿಕಾ , ಹಾಗೂ ಕುಮಾರಿ ದೀಪ್ತಿ ಇವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಹಿರಿಯ ಜಾನಪದ ಜಾನಪದ ಕಲಾವಿದ ಶಿವರಾಂ ಪಾಣರ (ಹಿರಿಯ ಪಾಣರಾಟದ ಕಲಾವಿದರು) ಹಾಗೂ ಚಿಕ್ಕು ಜಪ್ತಿ, ಐತು ಜಪ್ತಿ , ಪ್ರೌಢ ಶಾಲಾ ವಿಭಾಗದ ಕನ್ನಡ ಸಹ ಶಿಕ್ಷಕರಾದ ಸುಜಾತ, ನಾಗರಾಜ್ ಎನ್ , ಸುಧಾಕರ ಇವರನ್ನು ಹಾಗೂ ಉಪ ಪ್ರಾಂಶುಪಾಲ ಕರುಣಾಕರ ಶೆಟ್ಟಿ ಎಮ್ ಇವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೋಲು ಹೊಯ್ಯುವ ಹಾಡಿನ ಪ್ರಾತ್ಯಕ್ಷಿಕೆಯನ್ನು ಚಿಕ್ಕು ಜಪ್ತಿ , ಐತು ಜಪ್ತಿ ಹಾಗೂ ಚೆಂದು ಇವರು ನಡೆಸಿಕೊಟ್ಟರು , ಕ.ಜಾ.ಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷೆ ಸುಪ್ರೀತಾ ಪುರಾಣಿಕ ಪ್ರಾತ್ಯಕ್ಷಿಕೆಯನ್ನು ಪ್ರಾಸ್ತಾವನೆ ಸಲ್ಲಿಸಿ ಕಾರ್ಯಕ್ರಮ ನಿರ್ವಹಿಸಿದರು. ಪರಿಷತ್ತಿನ ಸದಸ್ಯರಾದ ಸಂಗೀತ ಬಿದ್ಕಲ್ ಕಟ್ಟೆ ಇವರು ಕಾರ್ಯಕ್ರಮ ನಿರ್ವಹಿಸಿ ಶಿಕ್ಷಕರಾದ ನಾಗರಾಜ್ ಎನ್ ವಂದಿಸಿದರು