Home » ನೋಟಿಸಿಗೆ ಉತ್ತರಿಸಲು 10 ದಿನ ಬೇಡ
 

ನೋಟಿಸಿಗೆ ಉತ್ತರಿಸಲು 10 ದಿನ ಬೇಡ

ಯತ್ನಾಳ್

by Kundapur Xpress
Spread the love

ಬೆಂಗಳೂರು : ಬಿಜೆಪಿ ಶಿಸ್ತು ಸಮಿತಿಯ ಅಧ್ಯಕ್ಷರು ನೀಡಿರುವ ನೋಟಿಸ್‌ ಉತ್ತರ ನೀಡುವೆ ನನಗೆ 10 ದಿನದ ಗಡುವು ಬೇಡ. ನನ್ನ ಬಳಿ ಉತ್ತರ ಸಿದ್ಧವಾಗಿದೆ. ನಾನು ಎವೆರೆಡಿ ಬ್ಯಾಟರಿ ಇದ್ದ ಹಾಗೆ. ಆನ್ ಮಾಡಿದಾಕ್ಷಣ ಚಾಲೂ ಆಗುತ್ತೆ. ಹಿಂದುತ್ವದ ಪರ, ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟ, ವಕ್ಸ್ ಸಂಬಂಧಿತ ಸಮಸ್ಯೆಗಳನ್ನು ಸಮಿತಿಯ ಗಮನಕ್ಕೆ ತರುವೆ. ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿ ಬಗ್ಗೆ ವಾಸ್ತವಾಂಶ ಪ್ರಸ್ತುತಪಡಿಸುತ್ತೇನೆ ವಂಶವಾಹಿ ರಾಜಕೀಯ ವಿರುದ್ದ ನನ್ನ ಬದ್ಧತೆ ಅಚಲವಾಗಿ ಉಳಿಯುತ್ತದೆ ಎಂದು ಯತ್ನಾಳ್‌ ಹೇಳಿಕೆ ನೀಡಿದ್ದಾರೆ

ನೋಟಿಸ್‌ನಲ್ಲೇನಿದೆ ?

• ರಾಜ್ಯ ನಾಯಕತ್ವದ ವಿರುದ್ಧದ ನಿಮ್ಮ ವಾಗ್ದಾಳಿ ಬಿಜೆಪಿ ನಿರ್ದೇಶನಕ್ಕೆ ವಿರುದ್ಧವಾಗಿದೆ

# ನಿಮ್ಮ ಹೇಳಿಕೆ ಪಕ್ಷದ ತತ್ವಗಳಿಗೆ ಧಕ್ಕೆ ತರುತ್ತಿದೆ, ಬೇರೆ ಪಕ್ಷಗಳಿಗೆ ಚರ್ಚೆಯ ವಸ್ತುವಾಗುತ್ತಿದೆ

# ವರ್ತನೆ ಸರಿಪಡಿಸಿಕೊಳ್ಳುವುದಾಗಿ ಈ ಹಿಂದೆ ನೀವು ನೀಡಿದ್ದ ಭರವಸೆಗಳು ಹುಸಿಯಾಗಿವೆ.

• ಎಚ್ಚರಿಕೆಯ ಹೊರತಾಗಿಯೂ ಅಶಿಸ್ತಿನ ವರ್ತನೆ ಮುಂದುವರೆಸಿರುವುದು ಕಳವಳಕಾರಿ ಸಂಗತಿ

# ಶಿಸ್ತು ಉಲ್ಲಂಘಿಸಿದ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದೆಂದು 10 ದಿನದಲ್ಲಿ ಉತ್ತರಿಸಿ

# 10 ದಿನದಲ್ಲಿ ಪ್ರತಿಕ್ರಿಯೆ ಕೊಡದಿದ್ದರೆ ಉತ್ತರವಿಲ್ಲ ಎಂದು ಪರಿಗಣಿಸಿ ಮುಂದಿನ ತೀರ್ಮಾನ

 

Related Articles

error: Content is protected !!