ಬೈಂದೂರು : ಕಸ್ತೂರಿ ರಂಗನ್ ವರದಿ ವಿರೋಧಿಸಿ ಹೋರಾಟ ತೀವ್ರಗೊಳಿಸುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಮಲೆನಾಡು ಜನ ಹಿತರಕ್ಷಣೆ ವೇದಿಕೆ ಹಾಗೂ ಬೈಂದೂರು ಫೌಡೇಶನ್ ವತಿಯಿಂದ ಡಿಸೆಂಬರ್ 6ರ ಮಧ್ಯಾಹ್ನ 2.30ಕ್ಕೆ ಶಂಕರನಾರಾಯಣ ರಸ್ತೆಯ ಅಂಪಾರು ಮಹಿಷಮರ್ದಿನಿ ಸಭಾಂಗಣದಲ್ಲಿ ವಿಚಾರ ವಿನಿಮಯ ಸಭೆ ನಡೆಯಲಿದೆ. ಮಲೆನಾಡು ಜನ ಹಿತರಕ್ಷಣೆ ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷರಾದ ಡಾ. ಅತುಲ್ ಕುಮಾರ್ ಪೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ. ಉಪಸ್ಥಿತಿಯಲ್ಲಿ ವಿಚಾರ ವಿನಿಮಯ ಸಭೆ ನಡೆಯಲಿದೆ. ಹೊಸಂಗಡಿ, ಮಚ್ಚಟ್ಟು, ಉಳ್ಳೂರು 74, ಸಿದ್ದಾಪುರ, ಎಡಮೊಗೆ, ಹಳ್ಳಿಹೊಳೆ, ಬೆಳ್ಳಾಲ, ಆಜ್ರೆ, ಕೊಡ್ಲಾಡಿ, ಕರ್ಕುಂಜೆ, ಚಿತ್ತೂರು, ವಂಡ್ಸೆ, ನೂಜಾಡಿ, ಹರ್ಕೂರು, ನಾವುಂದ, ಆಲೂರು, ಗೊಳಿಹೊಳೆ, ಜಡ್ಕಲ್, ಮುದೂರು, ಕೊಲ್ಲೂರು, ಯಳಜಿತ್, ಬೆಳಂಜೆ, ಯಡಮೊಗೆ, ಇಡೂರು, ಕುಂಜ್ಞಾಡಿ, ಬೈಂದೂರು, ಮುದಿನಗದ್ದೆ, ನುಕ್ರಾಡಿ, ಕೆರಾಡಿ, ಹೊಸೂರು, ವಾರಂಗ, ಕಬ್ಬಿನಾಲೆ, ಅಂಡಾರು, ಅಮಾಸೆಬೈಲು, ಕೆರ್ವಾಸೆ, ಮುದ್ರಾಡಿ, ಮರ್ಣೆ, ಶಿರ್ಲಾಲು, ಬೇರ್ಕಳ, ಮಾಳ, ಇದು, ನೂರಾಲು ಬೆಟ್ಟು, ಹೆಬ್ರಿ, ಚಾರ, ಕಳ್ತೂರು, ನಾಲ್ಕೂರು, ಬೆಳ್ವೆ, ಬೆಳ್ಮಣ್, ಕುಚ್ಚೂರು, ಅಲ್ಬಾಡಿ, ಮಡಾಮಕ್ಕಿ, ಶೇಡಿಮನೆ, ರಟ್ಟಾಡಿ, ಸಂಷೆ, ದುರ್ಗಾ ತಗ್ಗರ್ಸೆ ಮೊದಲಾದ ಗ್ರಾಮದ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟವು ಇನ್ನಷ್ಟು ತೀವ್ರ ಗೊಳಿಸುವ ಹಿನ್ನೆಲೆಯಲ್ಲಿ ಸಲಹೆ, ಮಾರ್ಗೋಪಾಯ, ಕಾನೂನು ಪರಿಹಾರ ಇತ್ಯಾದಿಗಳ ಸುದೀರ್ಘ ಚರ್ಚೆ ಹಾಗೂ ವಿಚಾರ ವಿನಿಮಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.