Home » ಸುಜಯೀಂದ್ರ ಹಂದೆಗೆ  ಸನ್ಮಾನ
 

ಸುಜಯೀಂದ್ರ ಹಂದೆಗೆ  ಸನ್ಮಾನ

ಯಕ್ಷಗಾನ ವಿದ್ವಾಂಸ

by Kundapur Xpress
Spread the love
ಕೋಟ : ಇತ್ತೀಚೆಗೆ ಯಕ್ಷ ದೀವಟಿಗೆ ಎಂಬ ಕೃತಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಭಾಜಕರಾದ ಯಕ್ಷಗಾನ ವಿದ್ವಾಂಸರಾದ ಸುಜಯೀಂದ್ರ ಹಂದೆಯವರನ್ನು ಕೋಟ ಹೈಸ್ಕೂಲ್ ಹತ್ತಿರದಲ್ಲಿರುವ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ವಿಚಾರಗಳ ವಿನಿಮಯ ಕೇಂದ್ರವಾದ ಗುರುಕಟ್ಟೆಯಲ್ಲಿ ಗೌರವಿಸಲಾಯಿತು. ಈ ವೇಳೆ ಗುರುವಣ್ಣ ಹೋಟೆಲ್ ಮಾಲೀಕರಾದ ಗುರುರಾಜ್ ಪೈ, ಯಕ್ಷಗಾನ ಗುರುಗಳಾದ ಕೋಟ ಸುದರ್ಶನ ಉರಾಳ, ಉಪನ್ಯಾಸಕರಾದ ರಾಘವೇಂದ್ರ ತುಂಗ ಕೆ., ನಾಗೇಂದ್ರ ಐತಾಳ್, ಯಶಸ್ವಿ ಕಲಾವೃಂದದ ವೆಂಕಟೇಶ್ ವೈದ್ಯ, ಬ್ಯಾಂಕ್ ಅಧಿಕಾರಿ ರಾಘವೇಂದ್ರ ತುಂಗ, ಯಕ್ಷಗಾನ ಚಂಡೆ ವಾದಕರಾದ ಶಿವಾನಂದ ಕೋಟರವರನ್ನು ಕಾಣಬಹುದು.
 

Related Articles

error: Content is protected !!