ಹೊಸದಿಲ್ಲಿ : ಕೇಂದ್ರ ಸರ್ಕಾರವು ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಖರೀದಿಸಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಶುಕ್ರವಾರ ಘೋಷಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶೋತ್ತರ ವೇಳೆಯಲ್ಲಿ ರೈತರಿಗೆ ಎಂಎಸ್ಪಿ ಸಮಸ್ಯೆಯ ಕುರಿತು ಪೂರಕ ಪಶ್ನೆಗಳಿಗೆ ಉತ್ತರವಾಗಿ ಅವರು ಈ ಭರವಸೆ ನೀಡಿದರು. ಎಂ ಎಸ್ ಪಿ ಗೆ ಕಾನೂನು ಬೆಂಬಲ ಸೇರಿದಂತೆ ಬೇಡಿಕೆಗಳ ಪಟ್ಟಿಯನ್ನು ಹೊತ್ತು ರೈತರು ದೆಹಲಿಗೆ ಕಾಲ್ನಡಿಗೆ ಜಾಥಾ ಆರಂಭಿಸಿದ ದಿನವೇ ಚೌಹಾಣ್ ಈ ಹೇಳಿಕೆ ನೀಡಿದ್ದಾರೆ. ಎಂಎಸ್ಪಿ ಸಮಸ್ಯೆಯ ಕುರಿತು ಪೂರಕ ಪಶ್ನೆಗಳಿಗೆ
ಇದು ಮೋದಿ ಭರವಸೆ :
ರೈತರ ಎಲ್ಲ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದು ನಾನು ನಿಮ್ಮ ಮೂಲಕ ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ಇದು ಮೋದಿ ಸರ್ಕಾರ ಮತ್ತು ಮೋದಿಯವರ ಭರವಸೆ ಎಂದಿದ್ದಾರೆ. ಇದೇ ವೇಳೆ ಪ್ರತಿಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಸಚಿವ ಚೌಹಾಣ್, ವಿಪಕ್ಷದವರು ಅಧಿಕಾರದಲ್ಲಿದ್ದಾಗ, ಅವರು ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ದಾಖಲೆ ಬರೆದಿದ್ದರು ಎಂದಿದ್ದಾರೆ. ಈ ವೇಳೆ ಅವರು ಮಾಜಿ ಕೃಷಿ ಸಚಿವ ಕಾಂತಿಲಾಲ್ ಭೂರಿಯಾ, ಮಾಜಿ ಕೃಷಿ ಸಚಿವರಾದ ಶರದ್ ಪವಾರ್ ಮತ್ತು ಕೆ.ವಿ. ಥಾಮಸ್ ಅವರ ಹೆಸರನ್ನು ಪ್ರಸ್ತಾಪಿಸಿದರು.