ಕುಂದಾಪುರ : ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇದರ ವತಿಯಿಂದ ಪ್ರತಿ ವರ್ಷ ನಡೆಯುವ ಸಂಗೀತ ಕಾರ್ಯಕ್ರಮ ಇನಿದನಿ ಮುಂದಿನ ವರ್ಷ ಜನವರಿ 12ರಂದು ನಡೆಯಲಿದ್ದು ಆಮಂತ್ರಣ ಪತ್ರಿಕೆಯನ್ನು ಯಕ್ಷಗಾನ ಕಲಾವಿದರಾದ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ಇವರು ಬಿಡುಗಡೆಗೊಳಿಸಿದರು
ಕುಂದಾಪುರ ಕಲಾಕ್ಷೇತ್ರದ ಟ್ರಸ್ಟ್ ಇದರ ಅವಿನಾಶಿ ಪ್ರಕಾಶಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಂಬೈ ಉದ್ಯಮಿ ಆದರ್ಶ ಶೆಟ್ಟಿ ಚಿತ್ರಿಕೆಯನ್ನು ಬಿಡುಗಡೆಗೊಳಿಸಿ ಸುಮಧುರ ಕನ್ನಡ ಚಿತ್ರಗೀತೆಗಳ ಇನಿದನಿ ಕಾರ್ಯಕ್ರಮಕ್ಕೆ ಸದಾ ನನ್ನ ಪ್ರೋತ್ಸಾಹವಿದೆ ಎಂದರು ಮುಖ್ಯ ಅತಿಥಿಗಳಾಗಿ ಎಚ್ ಎಂ ಎಂ ಶಾಲೆಗಳ ಪ್ರಾಂಶುಪಾಲರಾದ ಚಿಂತನಾ ರಾಜೇಶ್ ಹಾಗೂ ಕಾರ್ಟುನಿಸ್ಟ್ ಸತೀಶ್ ಆಚಾರ್ಯ ಆಗಮಿಸಿದ್ದರು
ಹೇಮಾ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಜೇಶ್ ಕಾವೇರಿ ಸ್ವಾಗತಿಸಿ ಕುಂದಾಪುರ ಕಲಾಕ್ಷೇತ್ರದ ಟ್ರಸ್ಟ್ ಅಧ್ಯಕ್ಷರಾದ ಬಿ ಕಿಶೋರ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು ಶ್ರೀಧರ್ ಸುವರ್ಣ ಧನ್ಯವಾದವಿತ್ತರು