ಕುಂದಾಪುರ : ಕೋಟಾದ ಕೋಟ ಹೈಸ್ಕೂಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಾಚಾರಿಯೊಬ್ಬರಿಗೆ ಅಟೋ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ
ಕುಶ (50 ವರ್ಷ) ಎಂಬವರು ರಸ್ತೆಯನ್ನು ದಾಟುತ್ತಿದ್ದಾಗ ಕೋಟಾದಿಂದ ಸಾಲಿಗ್ರಾಮದ ಕಡೆಗೆ ಸಾಗುತ್ತಿದ್ದ ಅಟೋರಿಕ್ಷಾ ಡಿಕ್ಕಿ ಹೊಡೆದಿದೆ ತಕ್ಷಣ ಅವರನ್ನುಕೋಟಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾಗಿದೆ
ಗಾಯಾಳು ಕುಶ ಎಂಬವರು ಕಳೆದ ಮೂರು ತಿಂಗಳಿನಿಂದ ಕೋಟಾದ ಹನುಮಾನ್ ಸಿಲ್ಕ್ ಬಟ್ಟೆ ಅಂಗಡಿಯಲ್ಲಿ ವಾಚ್ಮೆನ್ ಅಗಿ ಕೆಲಸ ನಿರ್ವಹಿಸುತ್ತಿದ್ದು ಸಂತೋಷ್ ಪೂಜಾರಿ ರಿಕ್ಷಾ ಚಲಾಯಿಸುತ್ತಿದ್ದರು ಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ