ಕೋಟ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ,ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರದ ಧುರೀಣರಾಗಿ ಗುರುತಿಸಿಕೊಂಡ ಜಿ.ರಾಜೀವ ದೇವಾಡಿಗ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 81 ವರ್ಷ ವಯಸ್ಸಾಗಿತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ವಿವಿದ ಸ್ತರಗಳಲ್ಲಿ ಕಾರ್ಯನಿರ್ವಹಿಸಿ,ಕೋಟ ಹಿಂದೂ ಜಾಗರಣ ವೇದಿಕೆ,ಸಾರ್ವಜನಿಕ ಗಣೇಶೋತ್ಸವ ಸಮಿತಿ,ಹಿರೇಮಹಾಲಿಂಗೇಶ್ವರ ಮಿತ್ರವೃಂದ ಹೀಗೆ ಹಲವು ಸಂಘಸಂಸ್ಥೆಗಳಲ್ಲಿ ಪ್ರಮುಖರಾಗಿ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು. ಕೋಟ ಸಹಕಾರಿ ವ್ಯವಸಾಯಕ ಸಂಘದ ಸಿಬ್ಬಂದಿಯಾಗಿ,ಪ್ರಭಂಧಕರಾಗಿ ಅದೇ ಸಂಘದಲ್ಲಿ ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು,ಕೋಟ ಶ್ರೀವಿಶ್ವವಿನಾಯಕ ವಿವಿದ್ದೋದೇಶ ಸಹಕಾರಿ ಸಂಘದ ನಿರ್ದೇಶಕರಾಗಿ ಸದಸ್ಯರಾಗಿ,ಕೋಟ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ,ಕೋಟ ಸೇವಾ ಸಂಗಮ ಶಿಶುಮಂದಿರದ ಸ್ಥಾನೀಯ ಸಮಿತಿಯ ಸದಸ್ಯರಾಗಿ,ಕೋಟ ಅಮೃತೇಶ್ವರ ಹಲವು ಮಕ್ಕಳ ತಾಯಿ ದೇಗುಲದ ಟ್ರಸ್ಟಿಯಾಗಿ,ದೇಗುಲದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಸಾಮಾಜಿಕ ನ್ಯಾಯದ ಬಗ್ಗೆ ತುಡಿಯುವ ಇವರ ಸಾಮಾಜಿಕ ಪ್ರಜ್ಞೆ ಅಗಾಧವಾದದ್ದು,ಹುಟ್ಟುಕೃಷಿಕರಾಗಿ ,ಹೈನುಗಾರರಾಗಿ ಪ್ರಸಿದ್ಧಿ ಪಡೆದಿದ್ದಾರೆ.ಕೋಟ ಗ್ರಾಮಪಂಚಾಯತ್ ಸದಸ್ಯ ಅಜಿತ್ ದೇವಾಡಿಗ ,ಸೇರಿದಂತೆ ಇಬ್ಬರು ಪುತ್ರ,ಒರ್ವ ಪುತ್ರಿಯನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ,ಕೋಟ ಅಮೃತೇಶ್ವರಿ ದೇಗುಲ ಅಧ್ಯಕ್ಷ ಆನಂದ್ ಸಿ ಕುಂದರ್ ಕಂಬನಿ ಮಿಡಿದ್ದಾರೆ.