Home » ಧಾರ್ಮಿಕ ಕಾರ್ಯದಲ್ಲಿ ಗಿರಿ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ
 

ಧಾರ್ಮಿಕ ಕಾರ್ಯದಲ್ಲಿ ಗಿರಿ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ

ಕೆ.ತಾರಾನಾಥ್ ಹೊಳ್ಳ

by Kundapur Xpress
Spread the love

ಕೋಟ : ಕೆರೆ ದೀಪೋತ್ಸವ ಎನ್ನುವ ಧಾರ್ಮಿಕ ಕಾರ್ಯಕ್ರಮದ ಮೂಲಕ ಯುವ ಪೀಳಿಗೆಯಲ್ಲಿ ಧಾರ್ಮಿಕ ಭಾವನೆ ಬೆಳೆಸುತ್ತಿರುವ ಸಂಸ್ಥೆ ಗಿರಿ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೆ.ತಾರಾನಾಥ ಹೊಳ್ಳ ನುಡಿದರು.
ಇತ್ತೀಚಿಗೆ ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಂಸ್ಥೆ ಹಮ್ಮಿಕೊಂಡ ಚಿತ್ರಪಾಡಿಯ ಕೆರೆ ದೀಪೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕöÈತರಾದ ತಾರಾನಾಥ ಹೊಳ್ಳ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಇದೇ ವೇಳೆ ಚಿತ್ರಪಾಡಿ ಶ್ರೀನಿವಾಸ್ ಸೋಮಾಯಾಜಿ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ನಾವಡ ವಹಿಸಿದ್ದರು.
ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷ ಸತ್ಯ ನಾರಾಯಣ ನಾಯಿರಿ, ಗೌರವಾಧ್ಯಕ್ಷರಾದ ಮಂಜುನಾಥ್ ಆಚಾರ್,ಸಂಸ್ಥೆಯ ಸಂಚಾಲಕರಾದ ರವಿ ಪೂಜಾರಿ,ಸಂಸ್ಥೆಯ ಲೆಕ್ಕಪರಿಶೋಧಕ ಮಾಧವ ಪೈ. ಕಾರ್ಯದರ್ಶಿ ಹರೀಶ ಆಚಾರ್, ಕೋಶಾಧಿಕಾರಿ ನಾಗೇಂದ್ರ ಆಚಾರ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ವಿ. ಕೆ ಅಸೋಸಿಯೇಟ್ಸ್ನ ಮಾಲಕರದ ರಾಮಚಂದ್ರ ಆಚಾರ್ ಸಾರಥ್ಯದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನೆರವೇರಿತು.ಸೃಷ್ಟಿ ನಾವಡ ಮತ್ತು ಸಾಹಿತ್ಯ ನಾವಡ ಪ್ರಾರ್ಥನೆಗೈದರು.
ಕಾರ್ಯಕ್ರಮವನ್ನು ಆದಿತ್ಯ ಐತಾಳ್ ನಿರೂಪಿಸಿದರು. ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಂಸ್ಥೆಯ ಸದಸ್ಯರು ಸಹಕರಿಸಿದರು

 

Related Articles

error: Content is protected !!