Home » ಅಪರಾಧ ಸುದ್ದಿಗಳು
 

ಅಪರಾಧ ಸುದ್ದಿಗಳು

by Kundapur Xpress
Spread the love

ಕೋಡಿ : ಯುವಕ ಚೇತರಿಕೆ

ಕುಂದಾಪುರ : ಶನಿವಾರ ಸಂಜೆ ಕೋಡಿ ಕಡಲಿಗಿಳಿದು ಸಮುದ್ರಪಾಲಾಗಿ ಸ್ಥಳೀಯರಿಂದ ರಕ್ಷಿಸಲ್ಪಟ್ಟು ಆಸ್ಪತ್ರೆಗೆ ದಾಖಲುಗೊಂಡಿದ್ದ ಧನುಷ್ (20) ಚೇತರಿಸಿಕೊಂಡಿದ್ದಾರೆ. ಘಟನೆಯಲ್ಲಿ ಇವರ ಇಬ್ಬರು ಸಹೋದರರು ನೀರುಪಾಲಾಗಿದ್ದರು. ಪ್ರತಿಭಾನ್ವಿತ ಸಹೋದರರ ಅಗಲುವಿಕೆಯಿಂದಾಗಿ ಅಂಪಾರು ಮೂಡುಬಗೆ ನಾಗರಿಕರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ

ಅಂದರ್‌ ಬಾಹರ್ : ಇಬ್ಬರು ಅಂದರ್

ಕುಂದಾಪುರ: ಶಿರಿಯಾರ ಗ್ರಾಮದ ಪಡುಮುಂಡು ಜಯಪ್ರಕಾಶ್ ಎಂಬವರ ತೋಟದ ಶಡ್‌ನಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ಅಂದರ್-ಬಾಹರ್ ಇಸ್ಪೀಟು ಜುಗಾರಿ ಅಡ್ಡೆಗೆ ಕೋಟ ಪಿಎಸ್‌ಐ ರಾಘವೇಂದ್ರ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಜಯಪ್ರಕಾಶ್, ಗಣೇಶ್ ಎಂಬವರನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಸಂತೋಷ್ ವಿಶ್ವನಾಥ್, ಕೊಟ್ರೇಶ್, ನಾಗರಾಜ, ರಾಘು, ಬೆನಕ ರಾಜು, ಸುಧೀರ್ ಪರಾರಿಯಾಗಿದ್ದಾರೆ. ನಗದು 5800 ರೂ. ಮತ್ತು ಇಸ್ಪೀಟ್ ಎಲೆ ಸ್ವಾಧಿ ನಪಡಿಸಿಕೊಳ್ಳಲಾಗಿದ್ದು ಕೋಟ ತಾಣೆಯಲ್ಲಿ ಪ್ರಕರಣ ದಾಖಲಾಗಿದೆ

ರೈಲಿಗೆ ಸಿಲುಕಿ  ಸಾವು

ಬೈಂದೂರಿನ ಸೂರ್ಕುಂದ ನಿವಾಸಿ ಶೀನ (78ವರ್ಷ) ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಶನಿವಾರ ಸಂಜೆ ಮನೆ ಹತ್ತಿರದ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೊರಟವರು ವಾಪಸ್ ಮನೆಗೆ ಬಂದಿರಲಿಲ್ಲ. ಭಾನುವಾರ ಬೆಳಗ್ಗೆ ಹುಡುಕಾಟ ನಡೆಸಿದಾಗ ಕಳವಾಡಿ ರೈಲ್ವೆ ಟ್ರ್ಯಾಕ್ ಬದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕಸ್ಮಿಕ ರೈಲಿಗೆ ಸಿಲುಕಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು ಪುತ್ರಿ ಬೇಬಿ ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕಾರು ಡಿಕ್ಕಿ ಗಾಯ

ಕುಂದಾಪುರ: ಹುಣ್ಣೆಮಕ್ಕಿ-ಬಿ.ಎಚ್. ಕ್ರಾಸ್ ರಸ್ತೆಯಲ್ಲಿ ಕಾರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸೀತಾರಾಮ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

 

Related Articles

error: Content is protected !!