Home » ಸಾಧು ಶ್ರೀ ಭದ್ರೇಶ ದಾಸ್ ಭೇಟಿ
 

ಸಾಧು ಶ್ರೀ ಭದ್ರೇಶ ದಾಸ್ ಭೇಟಿ

by Kundapur Xpress
Spread the love

ಉಡುಪಿ : ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ, ಕೃಷ್ಣಮಠದಲ್ಲಿ ನಡೆಯುವ ಗೀತಾ ಜಯಂತಿ‌ ಕಾರ್ಯಕ್ರಮ ಉದ್ಘಾಟನೆಗಾಗಿ ನವದೆಹಲಿಯ ಬಿಎಪಿಎಸ್ ಸ್ವಾಮಿ ನಾರಾಯಣ ಇನ್ಸ್ಟಿಟ್ಯೂಟ್ ನ ಮಹಾಮಹೋಪಾಧ್ಯಾಯ ಸಾಧು ಶ್ರೀ ಭದ್ರೇಶದಾದಾಸ್ ಮಂಗಳವಾರ ಕೃಷ್ಣಮಠಕ್ಕೆ ಆಗಮಿಸಿದರು. ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು.

ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕನಕ ನವಗ್ರಹ ಕಿಂಡಿ‌ ಮೂಲಕ ಶ್ರೀಕೃಷ್ಣ ದರ್ಶನ‌ ಮಾಡಿಸಿ, ಶ್ರೀಕೃಷ್ಣ ಪ್ರಸಾದ ನೀಡಿದರು. ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಇದ್ದರು.

ಬಳಿಕ ಸಾಧು ಭದ್ರೇಶ ದಾಸ್ ಅವರು ರಥೋತ್ಸವದಲ್ಲಿ ಭಾಗವಹಿಸಿದರು. ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು.

 

Related Articles

error: Content is protected !!