Home » ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್
 

ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್

by Kundapur Xpress
Spread the love

ಸಿಂಗಾಪುರ : ಭಾರತದ ಗ್ರಾಂಡ್ ಮಾಸ್ಟರ್ 18 ವರ್ಷದ ಡಿ.ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ನ.25ರಂದು ಸಿಂಗಾಪುರದಲ್ಲಿ ಆರಂಭಗೊಂಡಿದ್ದ 2023ರ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಗುರುವಾರ ಅತಿರೋಚಕ ಗೆಲುವು ಸಾಧಿಸಿದ ಗುಕೇಶ್, ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡ ಅತಿ ಕಿರಿಯ ಆಟಗಾರ ಎನ್ನುವ ದಾಖಲೆ ಬರೆದರು

14ನೇ ಹಾಗೂ ಕೊನೆಯ ಸುತ್ತಿಗೂ ಮುನ್ನ ಉಭಯ ಆಟಗಾರರು ತಲಾ 6.5 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದರು. ಕೊನೆಯ ಸುತ್ತು ಸಾಗಿದ ರೀತಿ ನೋಡಿದಾಗ ಎಲ್ಲರೂ ಈ ಸುತ್ತು ಸಹ ಡ್ರಾ ಆಗಲಿದ್ದು ಚಾಂಪಿಯನ್ ಯಾರೆಂದು ನಿರ್ಧರಿಸಲು ಟೈ ಬ್ರೇಕರ್ ಮೊರ ಹೋಗಬೇಕಾಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದರು. ಆದರೆ 4 ಗಂಟೆ, 58 ನಡೆಗಳ ಬಳಿಕ 14ನೇ ಸುತ್ತು ಗುಕೇಶ್ ಪಾಲಾಯಿತು. ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಭಾರತದ 2ನೇ ಹಾಗೂ ಒಟ್ಟಾರೆ 18ನೇ ಆಟಗಾರ ಎನ್ನುವ ಹಿರಿಮೆಗೆ  ಗುಕೇಶ್ ಪಾತ್ರರಾದರು

ರೋಚಕ ಹಣಾಹಣಿ  :

ಕೊನೆಯ ಸುತ್ತನ್ನು ಕಪ್ಪು ಕಾಯಿಗಳೊಂದಿಗೆ ಆಡಿದ ಗುಕೇಶ್, ಪಂದ್ಯ ಸಾಗಿದಂತೆ ಗೆಲ್ಲುವ ಫೇವರಿಟ್ ಅಂತೇನೂ ಕಂಡು ಬರಲಿಲ್ಲ. ಆದರೆ ಯಾವ ಹಂತದಲ್ಲೂ ಲಿರೆನ್ ದೊಡ್ಡ ಮಟ್ಟದ ಮೇಲುಗೈ ಸಾಧಿಸಲು ಗ್ಯಾಂಡ್ ಮಾಸ್ಟರ್ ಗುಕೇಶ್ ಬಿಡಲಿಲ್ಲ. ಪಂದ್ಯ ಡ್ರಾದತ್ತ ಸಾಗುತ್ತಿದೆ ಎಂದು ಅನಿಸಿ ಉಭಯ ಆಟಗಾರರು ಟೈ ಬ್ರೇಕರ್‌ಗೆ ಮಾನಸಿಕವಾಗಿ ಸಿದ್ದರಾಗುತ್ತಿದ್ದರು. ಇಬ್ಬರ ಬಳಿಯೂ ಉಳಿದಿದ್ದು ತಲಾ ಒಂದು ರೂಕ್ (ಆನೆ) ಹಾಗೂ ಬಿಷಪ್ (ಒಂಟೆ). ಈ ಹಂತದಲ್ಲಿ ಲಿರೆನ್ ಬಹಳ ದೊಡ್ಡ ಎಡವಟ್ಟು ಮಾಡಿದರು. ಅವರ ಕೊನೆಯ ನಡೆ ಚೆಸ್ ಜಗತ್ತಿಗೆ ಅಚ್ಚರಿ ಮೂಡಿಸಿತು. ಪಂದ್ಯದುದ್ದಕ್ಕೂ ಅತ್ಯುತ್ತಮ ಹೋರಾಟ ನಡೆಸಿದ ಲಿರೆನ್ ಕೊನೆಗೆ ವಿಶ್ವ ಕಿರೀಟವನ್ನು ಗುಕೇಶ್ ಗೆ ಒಪ್ಪಿಸಿ ನಿರ್ಗಮಿಸಿದರು

ಪ್ರಧಾನಿ, ಗಣ್ಯರಿಂದ ಅಭಿನಂದನೆ

ನವದೆಹಲಿ: ವಿಶ್ವ ಚಾಂಪಿಯನ್ ಗುಕೇಶ್‌ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಬ್ರೌಪದಿ ಮುರ್ಮು, ದಿಗ್ಗಜ ಚೆಸ್ ಪಟು ವಿಶ್ವನಾಥನ್ ಆನಂದ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ. 

 

Related Articles

error: Content is protected !!