Home » ಪಂಚಮಸಾಲಿ ಗದ್ದಲಕ್ಕೆ ಕಲಾಪ ಬಲಿ
 

ಪಂಚಮಸಾಲಿ ಗದ್ದಲಕ್ಕೆ ಕಲಾಪ ಬಲಿ

by Kundapur Xpress
Spread the love

ಬೆಳಗಾವಿ : ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಹಾಗೂ ಪಂಚಮಸಾಲಿ 2A ಮೀಸಲಾತಿ ವಿಚಾರ ಗುರುವಾರ ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿತು. ಲಾಠಿ ಚಾರ್ಜ್‌ಗೆ ಸಮುದಾಯದ ಕ್ಷಮೆಯನ್ನು ಸರ್ಕಾರ ಕೇಳಬೇಕು, ಘಟನೆ ಕುರಿತು ನ್ಯಾಯಾಂಗ ತನಿಖೆಗೆ ನಡೆಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಕ್ಯಾರೆ ಎನ್ನದ ರಾಜ್ಯ ಸರ್ಕಾರ ಕ್ಷಮೆ ಕೋರುವುದಿಲ್ಲ ಹಾಗೂ ಲಾಠಿಚಾರ್ಜ್‌ಗೆ ಯಾವುದೇ ರೀತಿಯ ತನಿಖೆ ನಡೆಸಲ್ಲ ಎಂದು ಪ್ರತಿಪಾದಿಸಿತು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆ ಸಿದರು. ಈ ಪ್ರಕ್ರಿಯೆಗೆ ಸದನದ ಬಹುತೇಕ ಅವಧಿ ಬಲಿಯಾಯಿತು.

ಗುರುವಾರ ಕಲಾಪ ಶುರುವಾಗುತ್ತಿದ್ದಂತೆಯೇ ಉಭಯ ಸದನಗಳ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು, ಲಾಠಿ ಚಾರ್ಜ್ ವಿಷಯ ಪ್ರಸ್ತಾಪಿಸಿ ಸರ್ಕಾರ ಕ್ಷಮೆ ಕೋರಬೇಕು ಹಾಗೂ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಆಗ್ರಹಿ ಸಿದರು. ಜತೆಗೆ ಪಂಚಮಸಾಲಿಗಳಿಗೆ 2ಎ ಮೀ ಸಲಾತಿ ಒದಗಿಸಲೂ ಆಗ್ರಹಿಸಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯರು, ‘ಇದು ಬಿಜೆಪಿ ಪ್ರಾಯೋಜಿತ ಹೋರಾಟ ಎಂದು ಆರೋಪಿಸಿದರು 

 

Related Articles

error: Content is protected !!