Home » ಡಿ.19 ರಂದು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪರೀಕ್ಷೆ
 

ಡಿ.19 ರಂದು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪರೀಕ್ಷೆ

ತ್ರಿಶಾ ಚಾಂಪಿಯನ್ಸ್ ಟೆಸ್ಟ್

by Kundapur Xpress
Spread the love

ಕಟಪಾಡಿ : ಶಿಕ್ಷಣದ ಗುರಿ ಮಕ್ಕಳಿಗೆ ಆತ್ಮಸ್ಥೈರ್ಯವನ್ನು ತುಂಬುವುದು ಹಾಗೂ ನೈತಿಕ ಮೌಲ್ಯಗಳ ಅರಿವು ಮೂಡಿಸುವುದಾಗಿದೆ. ಈ ನಿಟ್ಟಿನಲ್ಲಿ ಕಳೆದ 26 ವರ್ಷಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆಯ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ “ತ್ರಿಶಾ ಚಾಂಪಿಯನ್ಸ್ ಟೆಸ್ಟ್”  ಅನ್ನುವ ಪರೀಕ್ಷೆಯನ್ನು ಆಯೋಜಿಸಲಾಗಿದೆ.

ಈ ಪರೀಕ್ಷೆಯು ಉಚಿತವಾಗಿದ್ದು ಆನ್ಲೈನ್ ಮೂಲಕ ಡಿಸೆಂಬರ್ 19 ರಂದು ಸಂಜೆ 7  ಗಂಟೆಗೆ ನಡೆಯಲಿದೆ. ಬಹು ಆಯ್ಕೆ ಮಾದರಿಯಲ್ಲಿದ್ದು ಗಣಿತ, ಲಾಜಿಕಲ್ ರೀಸನಿಂಗ್, ಇಂಗ್ಲೀಷ್, ಸಾಮಾನ್ಯ ಜ್ಞಾನ ಹಾಗೂ ವಿಜ್ಞಾನ ವಿಷಯಗಳನ್ನು ಒಳಗೊಂಡಿದೆ.

ಪ್ರತಿ ಒಂದು ಅಂಕಗಳಿಗೆ 500 ರೂಪಾಯಿ ವಿದ್ಯಾರ್ಥಿವೇತನ

ಈ ಬಾರಿ ತ್ರಿಶಾ ಸಂಸ್ಥೆಯು ವಿನೂತನ ಮಾದರಿಯಲ್ಲಿ ಪರೀಕ್ಷೆಯನ್ನು ಆಯೋಜಿಸಿದ್ದು  ವಿದ್ಯಾರ್ಥಿಗಳು ಗಳಿಸುವ ಪ್ರತಿಯೊಂದು ಅಂಕಗಳಿಗೆ 500 ರೂಪಾಯಿ ಶುಲ್ಕ ವಿನಾಯಿತಿಯನ್ನು ಪಡೆಯಬಹುದಾಗಿದೆ.  ಈ ಸದಾವಕಾಶ ಡಿಸೆಂಬರ್ 30ರ ಒಳಗೆ ದಾಖಲಾತಿಯನ್ನು ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಪರೀಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ವಿದ್ಯಾರ್ಥಿಗಳು https://tinyurl.com/Trishachampionstest ಈ ಲಿಂಕ್ ನ ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮತ್ತು ತ್ರಿಶಾ ಕ್ಲಾಸಸ್, ವಿದ್ಯಾರ್ಥಿ ಗ್ರಾಮ, ಗಣೇಶ್ ಬಾಗ್ ಲೇಔಟ್, ಕೊಟ್ಟಾರ, ಮಂಗಳೂರಿಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಪ್ರಯೋಜನಗಳು :

  • ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು
  • ಆತ್ಮವಿಶ್ವಾಸ ಹಾಗೂ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆಯನ್ನು ವೃದ್ಧಿಸುತ್ತದೆ.
  • ಆಕರ್ಷಕ ವಿದ್ಯಾರ್ಥಿವೇತನ
 

Related Articles

error: Content is protected !!