Home » ಡಾ.ಶ್ರುತಿ ಬಲ್ಲಾಳ್‌ಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ ಟೂರಿಸಂ ಅವಾರ್ಡ್
 

ಡಾ.ಶ್ರುತಿ ಬಲ್ಲಾಳ್‌ಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ ಟೂರಿಸಂ ಅವಾರ್ಡ್

ಉಡುಪಿಯ ಖ್ಯಾತ ಮಧುಮೇಹ ತಜ್ಞೆ

by Kundapur Xpress
Spread the love

ಕುಂದಾಪುರ : ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ.ಶ್ರುತಿ ಬಲ್ಲಾಳ್ ಫಿಲಿಪೈನ್ಸ್ನ ಮನಿಲಾದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ ಟೂರಿಸಂ-2024 ಪ್ರಶಸ್ತಿ ಗೆದ್ದು, ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2024ರ ರಾಯಭಾರಿ ಆಗಿ ಸಾಧನೆ ಮೆರೆದಿದ್ದಾರೆ

ಹತ್ತು ದಿನಗಳ ಪ್ರಶಸ್ತಿ ಆಯ್ಕೆಯ ಈ ಸುತ್ತಿನಲ್ಲಿ ಅವರ ಬುದ್ಧಿಮತ್ತೆ, ದಯೆ ಮತ್ತು ಪರಿಸರ ಕಾರಣಗಳಿಗೆ ತೋರಿದ ಬದ್ಧತೆ ವಿಶ್ವದ ಗಮನ ಸೆಳೆದಿದೆ. ಇದು ಭಾರತೀಯ ಮಹಿಳಾ ಸಬಲೀಕರಣಕ್ಕೆ ಒಂದು ಮಹತ್ವದ ಮೈಲಿಗಲ್ಲು ಎಂದು ನಂಬಲಾಗಿದೆ

ಮಧುಮೇಹ ಜಾಗೃತಿಯ ಚಾಂಪಿಯನ್ ಡಾ.ಶ್ರುತಿ  ಬಲ್ಲಾಳ್ ತಮ್ಮ ವೃತ್ತಿಜೀವನವನ್ನು ಮಧುಮೇಹ ತಡೆಗಟ್ಟುವಿಕೆ ಮತ್ತು ಶೀಘ್ರ ಪತ್ತೆಗೆ ಮೀಸಲು ಮಾಡಿಕೊಂಡಿದ್ದಾರೆ. ಅವರು 100ಕ್ಕೂ ಹೆಚ್ಚು ಉಚಿತ ಜಾಗೃತಿ ಕಾರ್ಯಕ್ರಮ ಹಾಗೂ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ

ಪ್ರಾದೇಶಿಕ, ಹವಾಮಾನ ಸ್ಥಿತಿಗೆ ತಕ್ಕ ಹಾಗೂ ಪ್ರಾಚೀನ ಆಹಾರ ಪದ್ಧತಿಗಳು, ಯೋಗ, ಧ್ಯಾನ ಮತ್ತು ಶಾರೀರಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿದ್ದಾರೆ ಪರಿಸರ ಸ್ನೇಹಿ ಕಾರ್ಯಕ್ರಮದ ಮೂಲಕ ಮಾನವ ಮತ್ತು ಪರಿಸರದ ನಡುವೆ ಸಮತೋಲನವನ್ನು ಉಂಟುಮಾಡಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಡಾ.ಶ್ರುತಿ ಬಲ್ಲಾಳ್ ಅವರ ಗೆಲುವು ಆರೋಗ್ಯಕರ ಭೂಮಿ ಮತ್ತು ಸಮುದಾಯದ ಬಗ್ಗೆ ಅವರ ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಮಿಸಸ್ ಅರ್ಥ್ ಇಂಟರ್‌ನೇಶನಲ್ ಟೂರಿಸಂ ಗೌರವಿಸಿದೆ

 

Related Articles

error: Content is protected !!