Home » ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ
 

ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ

ಮೂಡುಗಿಳಿಯಾರು

by Kundapur Xpress
Spread the love

ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೊಟ್ರಾಕ್ಟ್ ಕ್ಲಬ್, ರೋಟರಿ ಸಮುದಾಯದಳ ಮೂಡುಗಿಳಿಯಾರು, ವಾಗ್ದಾನ್ ಒಪ್ಟಿಕಲ್ ಸಾಲಿಗ್ರಾಮ, ಆರ್ಟ್ ಆಫ್ ಲಿವಿಂಗ್ ಸಾಲಿಗ್ರಾಮ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಮತ್ತು ಪ್ರಸಾದ್ ನೇತ್ರಾಲಯ ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಇತ್ತಿಚಿಗೆ ಮೂಡುಗಿಳಿಯಾರು ಶಾಲೆಯಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ 54 ಜನ ನೇತ್ರ ತಪಾಸಣೆ ಫಲಾಣುಭವಿಗಳಾದರು, ಅದರಲ್ಲಿ 15 ಜನರಿಗೆ ಕನ್ನಡಕದ ಅವಶ್ಯಕತೆ ಹಾಗೆ 6 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಯ ಅವಶ್ಯಕತೆ ಇರುವುದನ್ನು ಗುರುತಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷಯನ್ನು ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ ವಹಿಸಿದ್ದರು,
ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಡಾ ಕೃಷ್ಣ ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ವೇಳೆ ಕೃಷಿಯಲ್ಲಿ ಸಾಧನೆಗೈದ ನರಸಿಂಹ ಶೆಟ್ಟಿ ತಂಬಳದಿಮನೆ ಮತ್ತು ಶೀನ ಪೂಜಾರಿ ಗೊಳಿಜೆಡ್ಡು ಗಿಳಿಯಾರು ಇವರನ್ನ ಗುರುತಿಸಿ ಸನ್ಮಾನಿಸಲಾಯಿತು,

ಪ್ರಸಾದ್ ನೇತ್ರಾಲಯ ಉಡುಪಿ ವೈದ್ಯರಾದ ಡಾ.ಶೀತಲ, ರೋಟರಿ ಸಮುದಾಯದಳ ಮೂಡುಗಿಳಿಯಾರು ಇದರ ಅಧ್ಯಕ್ಷ ಗೋಪಾಲ್, ಕೋಟ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ,ನಿವೃತ್ತ ಮುಖ್ಯ ಶಿಕ್ಷಕ ಸುರೇಂದ್ರ ಶೆಟ್ಟಿ, ಆರ್ಟ್ ಆಫ್ ಲಿವಿಂಗ್‌ನ ಗುರುಗಳಾದ ದಿನೇಶ್ ತೆಕ್ಕಟ್ಟೆ ,ಸದಸ್ಯರಾದ ಆನಂದ್ ಕುಂದರ್ ಉಪಸ್ಥಿತರಿದ್ದರು, ರೋಟರಿ ಸದಸ್ಯರಾದ ಲಲಿತಾ ಸ್ವಾಗತಿಸಿದರು, ರೊಟ್ರಾಕ್ಟ್ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವೇಂದ್ರ ಶ್ರೀಯನ್ ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು.

 

Related Articles

error: Content is protected !!