ಉಡುಪಿ : ಉಡುಪಿ ಕಡಿಯಾಳಿಯ ಆಸರೆ ಚಾರಿಟೇಬಲ್ ಟ್ರಸ್ಟ ಸಮಾಜದ ಬಡವರಿಗೆ ಆಸರೆ ಆಗುವುದರ ಮೂಲಕ ಎಲ್ಲಾ ಗಣೇಶೋತ್ಸವ ಸಮಿತಿಗಳಿಗೆ ಅತ್ಯುತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಎರಡು ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿದರು
ಉಡುಪಿ ಆಸರೆ ಚಾರಿಟೇಬಲ್ ಟ್ರಸ್ಟ್ (ರಿ )ಕಡಿಯಾಳಿ ಇವರ ಸಹಯೋಗದಲ್ಲಿ ದಾನಿಗಳ ಸಹಕಾರದೊಂದಿಗೆ ಪೇಜಾವರ ಶ್ರೀಗಳ ರಾಮರಾಜ್ಯ ಪರಿಕಲ್ಪನೆಯಂತೆ ಸೂರಿಲ್ಲದವರಿಗೆ ಸೂರು ನಿರ್ಮಿಸಿಕೊಡುವ ಸಂಕಲ್ಪದಂತೆ ಉಡುಪಿಯ ಗುಂಡಿಬೈಲು ಪಾಡಿಗಾರನ ಮಾಲಾಶ್ರೀ ಭಟ್ ಮತ್ತು ಕುಂಜಿಬೆಟ್ಟುನ ಶ್ರೀಮತಿ ಪ್ರತಿಮಾ ಪೂಜಾರ್ತಿ ರವರಿಗೆ ನಿರ್ಮಿಸಲಾದ ಎರಡು ಮನೆಗಳನ್ನು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶುಕ್ರವಾರ ಫಲಾನುಭವಿಗಳಿಗೆ ಹಸ್ತಾಂತರಿಸಿದರು
ಪಾಡಿಗಾರು ಮನೆಯ ದಾನಿಗಳಾದ ಲಕ್ಷ್ಮಿ ಎಲೆಕ್ಟ್ರಿಕಲ್ಸ್ ಉಡುಪಿ ಇದರ ಮಾಲಿಕರಾದ ಶ್ರೀ ರಾಜಗೋಪಾಲ್ ಆಚಾರ್ಯ ಮತ್ತು ಶ್ರೀಮತಿ ಕನಕ ಲಕ್ಷ್ಮಿ ದಂಪತಿಗಳಿಗೆ ಸ್ವಾಮೀಜಿ ಗೌರವಿಸಿದರು
ಆಸರೆ ಟ್ರಸ್ಟಿನ ಅಧ್ಯಕ್ಷರಾದ ಪ ವಸಂತ ಭಟ್ ಕುಂಜಿಬೆಟ್ಟು ವಾರ್ಡಿನ ನಗರಸಭಾ ಸದಸ್ಯರಾದ ಗಿರೀಶ್ ಅಂಚನ್, ಉಪಸ್ಥಿತರಿದ್ದು ಟ್ರಸ್ಟಿನ ಸದಸ್ಯರಾದ ಮಲ್ಪೆ ವಲ್ಲಭ ಭಟ್ ಪ್ರಾಸ್ತಾವಿಸಿ ಟ್ರಸ್ಟಿನ ಕೋಶಾಧಿಕಾರಿಗಳಾದ ಸತೀಶ್ ಕುಲಾಲ್ ಕಡಿಯಾಳಿ ಮತ್ತು ವಾಸುದೇವ ಭಟ್ ಪರಂಪಳ್ಳಿ ರವರು ಕಾರ್ಯಕ್ರಮ ನಿರ್ವಹಿಸಿದರು
ಈ ಸಂದರ್ಭದಲ್ಲಿ ಉಡುಪಿ ಲಯನ್ಸ್ಉಪ ಗವರ್ನರ್ ಶ್ರೀಮತಿ ಸಪ್ನಾ ಸುರೇಶ್ , ಲಯನ್ಸ್ ಉಡುಪಿ ನಗರ ಅಧ್ಯಕ್ಷರಾದ ಲೂಯಿಸ್ ಲೋ ಬೋ, ಶ್ರೀ ವೇಣು ಮಾಧವ ಆಚಾಯ೯, ಶ್ರೀಮತಿ ಜಯಂತಿ ವಿಷ್ಣುಮೂರ್ತಿ, ವಕೀಲರಾದ ಶಶಿಕಿರಣ್, ಶ್ರೇಯಸ್ ಮತ್ತು ಶ್ರೀ ಲಕ್ಷ್ಮಿ ಹರ್ಷಿತ್ ,ಮೇಘ ಇಂಜಿನಿಯರ್ ರಾಕೇಶ್ ಜೋಗಿ ವಿದ್ಯಾ ಶಾಮ್ ಸುಂದರ್ ಗಣೇಶೋತ್ಸವ ಸಮಿತಿಯ ಸದಸ್ಯರುಗಳಾದ ರಾಮಚಂದ್ರ ಸತ್ಯನಾರಾಯಣ ಕೆ ಸಂತೋಷ ಕಿಣಿ, ಪ್ರಭಾವತಿ ಶೋಭಾ ಕಾಮತ ಸಂದೀಪ್ ಸನಿಲ್, ಸಂಧ್ಯಾ ಪ್ರಭು .ನಳಿನಿ ನಯನ ಅಜಿತ್ ಇನ್ನಿತರರು ಉಪಸ್ಥಿತರಿದ್ದರು*