Home » ಅನುಭವ ಮಂಟಪವನ್ನೇ ವಕ್ಪ್‌ ತನ್ನ ಆಸ್ತಿಯೆಂದು ಹೇಳಲಾರಂಭಿಸಿದೆ
 

ಅನುಭವ ಮಂಟಪವನ್ನೇ ವಕ್ಪ್‌ ತನ್ನ ಆಸ್ತಿಯೆಂದು ಹೇಳಲಾರಂಭಿಸಿದೆ

ತೇಜಸ್ವಿ ಸೂರ್ಯ ವಾಗ್ದಾಳಿ

by Kundapur Xpress
Spread the love

ನವದೆಹಲಿ : ಸಂವಿಧಾನಕ್ಕೆ ಕಾಂಗ್ರೆಸ್ ಅಪಚಾರ ಮಾಡಿದೆ. ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕ‌ರ್ ಅವರನ್ನೇ ಕಾಂಗ್ರೆಸ್ ಅವಮಾನಿಸಿತ್ತು. ಅಲ್ಲದೆ, ಕ್ರಾಂತಿಕಾರಿ ಬಸವಣ್ಣರಿಂದ ಸ್ಥಾಪಿತವಾದ ಅನುಭವ ಮಂಟಪವನ್ನೇ ಇಂದು ವಕ್ಪ್‌ ತನ್ನ ಆಸ್ತಿಯೆಂದು ಹೇಳಲಾರಂಭಿಸಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬಸವಣ್ಣನವರು ಪ್ರಜಾಪ್ರಭುತ್ವದ ತತ್ವಗಳನ್ನು ಬಿತ್ತಿದ ಅನುಭವ ಮಂಟಪವನ್ನು ವಕ್ಪ್‌ ಆಸ್ತಿ ಎಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್‌ ಜಾತ್ಯಾತೀತತೆಯ ವಿಕೃತ ಬ್ರಾಂಡ್‌ನ ಪರಿಣಾಮವಾಗಿದೆ. ಪ್ರಜಾಪ್ರಭುತ್ವಕ್ಕೆ ಮಾದರಿ ಎನ್ನಬಹುದಾದ, ಕ್ರಾಂತಿಕಾರಿ ಬಸವಣ್ಣರಿಂದ ಸ್ಥಾಪಿತವಾದ ಅನುಭವ ಮಂಟಪವನ್ನೇ ಇಂದು ವಕ್ಪ್‌ ತನ್ನ ಆಸ್ತಿಯೆಂದು ಹೇಳಲಾರಂಭಿಸಿದೆ. ಕಾಂಗ್ರೆಸ್ ಸೆಕ್ಯುಲರಿಸಂ ದುರಂತ ಮಾದರಿಗೆ ಇದೊಂದು ಉದಾಹರಣೆ’ ಎಂದರು.

‘ಆರೆಸ್ಸೆಸ್ ಡಾ. ಅಂಬೇಡ್ಕರ್ ಅವರನ್ನು ವಿರೋಧಿಸಿತು ಎಂಬುದು ಸಂಪೂರ್ಣ ಸುಳ್ಳು. ಗಮನಾರ್ಹ ವಿಚಾರ ಎಂದರೆ ಅವರನ್ನು ಕಾಂಗ್ರೆಸ್ ಸೋಲಿಸಲು ಪ್ರಯತ್ನಿಸಿತು. ಆದರೆ ಆರ್‌ಎಸ್ಎಸ್ ಪ್ರಚಾರಕರು, ಅಂಬೇಡ್ಕರರ ಚುನಾವಣಾ ಏಜೆಂಟ್ ಆಗಿ ಕಾರ್ಯನಿರ್ವಹಿಸಿದರು’ ಎಂದು ಸ್ಮರಿಸಿದರು. ‘1951ರಲ್ಲಿ ಸಂವಿಧಾನದ 1ನೇ ತಿದ್ದುಪಡಿ ಹಾಗೂ 1975ರಲ್ಲಿ ಸಂವಿಧಾನದ 356ನೇ ವಿಧಿಯ ದುರುಪಯೋಗಗಳು ಕಾಂಗ್ರೆಸ್ ಪಕ್ಷ ಸಂವಿಧಾನದ ಮೇಲೆ ನಡೆಸಿದ ಆಕ್ರಮಣಗಳು. ಆದರೆ ಬಿಜೆಪಿ ಅವರ ದಾಳಿಗಳ ವಿರುದ್ಧ ಹೋರಾಡಿದೆ ಮತ್ತು ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಿದೆ’ ಎಂದು ಪ್ರಹಾರ ನಡೆಸಿದರು.

 

Related Articles

error: Content is protected !!