ಕಾರ್ಕಳ : ಆಟವಾಡುತ್ತಿದ್ದಾಗಲೇ ಎದೆನೋವು ಕಾಣಿಸಿಕೊಂಡು ರಾಜ್ಯ ಮಟ್ಟದ ಕಬಡ್ಡಿ ಆಟಗಾರರೊಬ್ಬರು ಹೃದಯಾ ಘಾತದಿಂದ ಮೃತಪಟ್ಟ ಧಾರುಣ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಶನಿವಾರ ನಡೆದಿದೆ. ಹೆಬ್ರಿ ತಾಲೂಕಿನ ಮುಟ್ಟುಪಾಡಿಯ ನಡುಮನೆ ಪ್ರೀತಂ ಶೆಟ್ಟಿ (26 ವರ್ಷ) ಮೃತ ಕಬಡ್ಡಿ ಆಟಗಾರ ನಾಗಮಂಗಲದಲ್ಲಿ’ಕಬಡ್ಡಿ ಆಟವಾಡುತ್ತಿದ್ದಾಗ ಪ್ರೀತಂ ಶೆಟ್ಟಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಪ್ರೀತಂ ಶೆಟ್ಟಿ ಜನವರಿಯಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ತಯಾರಿ ನಡೆಸಿದ್ದರು ಎಂದು ತಿಳಿದು ಬಂದಿದೆ.