ಕುಂದಾಪುರ: ಕೋಟೇಶ್ವರದ ಗೋಪಾಡಿ ಗ್ರಾಮದ ನಿವಾಸಿಯಾದ ವಕೀಲಿ ವೃತ್ತಿಯನ್ನು ನಡೆಸುತ್ತಿದ್ದ ಸದಾ ಹಸನ್ಮುಖಿಯಾದ ಜಯಪ್ರಕಾಶ್ ಸಾಲಿನ್ಸ್ ರವರು ಸೋಮವಾರ ಮಧ್ಯಾಹ್ನ ತೀವೃ ಹೃದಯಾಘಾತದಿಂದ ನಿಧನ ಹೊಂದಿದರು ನಿನ್ನೆ ಬೆಳಿಗ್ಗೆ ಅವರು ಉಡುಪಿಯ ಆರ್ ಟಿ ಓ ಕಚೇರಿಗೆ ತರಳಿ ಮನೆಗೆ ವಾಪಾಸ್ಸಾಗುವ ವೇಳೆ ಕೋಟೇಶ್ವರದ ಹೂವಿನಕೆರೆ ರಸ್ತೆಯ ಕಮಾನಿನ ಪಕ್ಕದಲ್ಲಿ ಕಾರನ್ನು ನಿಲ್ಲಿಸಿದ್ದು ಅಲ್ಲಿಯೇ ತೀವೃ ಹೃದಯಾಘಾತದಿಂದ ಕುಸಿದುಬಿದ್ದರು ತಕ್ಷಣವೇ ಅವರನ್ನು ಡಾ.ಎನ್ ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಯಿತು ಜಯಪ್ರಕಾಶ ಸಾಲಿನ್ಸ್ ರವರು ಜೆಸಿಐ ಮೊದಲಾದ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮೃತರು ಪತ್ನಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ