ಮಲ್ಪೆ : ಉಡುಪಿ ತಾಲೂಕು ಕೊಡವೂರು ಗ್ರಾಮದ ವಢಬಾಂಢೇಶ್ವರ ರಸ್ತೆಯ ಕೋರ್ನೆಟ್ ಸರ್ಕಲ್ ಬಳಿ ಸ್ಕೂಟರ್ ಗೆ ಹಿಂದಿನಿಂದ ಬಂದ ಮಾರುತಿ ಕಾರೊಂದು ಢಿಕ್ಕಿ ಹೊಡೆದ ಪರೀಣಾಮ ಸ್ಕೂಟರಿನಲ್ಲಿದ್ದ ದಂಪತಿಗಳು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ
ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರನ್ನು ಚಾಲಕ ಆದಿಲ್ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸ್ಕೂಟರ್ ನ್ನು ಓವರಟೇಕ್ ಮಾಡಿಕೊಂಡು ಕೊರ್ನೆಟ್ ಸರ್ಕಲ್ ನಲ್ಲಿ ಕೊಡವೂರು ರಸ್ತೆ ಕಡೆಗೆ ಒಮ್ಮೆಲೇ ಎಡಕ್ಕೆ ಚಲಾಯಿಸಿದ ಪರಿಣಾಮ ಕಾರಿನ ಹಿಂಭಾಗ ಸ್ಕೂಟರ್ ನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಜಯಕರ್ ಮತ್ತು ಅವರ ಹೆಂಡತಿ ರಸ್ತೆಗೆ ಬಿದ್ದಿದ್ದು, ಬಲ ಭುಜಕ್ಕೆ ಒಳನೋವು ಆಗಿದ್ದು, ಹೆಂಡತಿಯ ಬಲಕೈಯ ಅಂಗೈಗೆ ರಕ್ತಗಾಯವಾಗಿರುತ್ತದೆ. ನಂತರ ದಂಪತಿಯನ್ನು ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ