Home » ಹೊಳೆ ಸಾಲು ಹೂಳೆತ್ತಲು 4.5 ಕೋಟಿ ರೂ ಮಂಜೂರಾತಿ
 

ಹೊಳೆ ಸಾಲು ಹೂಳೆತ್ತಲು 4.5 ಕೋಟಿ ರೂ ಮಂಜೂರಾತಿ

ರೈತಧ್ವನಿ ಹೋರಾಟಕ್ಕೆ ಮಣೆಹಾಕಿದ ಸರಕಾರ

by Kundapur Xpress
Spread the love

ಕೋಟ : ಇಲ್ಲಿನ ಕೋಟ ಹಾಗೂ ಕುಂದಾಪುರ ಹೋಬಳಿ ಭಾಗದ ಬಹುವರ್ಷದ ಕೂಗು ಹೊಳೆ ಸಾಲುಗಳ ಹೂಳೆತ್ತುವ ಹೋರಾಟಕ್ಕೆ ರಾಜ್ಯ ಸರಕಾರ ಮನ್ನಣೆ ನೀಡಿ ಸುಮಾರು 4.5 ಕೋಟಿ ರೂಗಳ ಮಂಜೂರಾತಿ ಆದೇಶಕ್ಕೆ ಉಪಮುಖ್ಯಮಂತ್ರಿ ಮಂಜುರಾತಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಕಳೆದ ಸಾಕಷ್ಟು ವರ್ಷಗಳಿಂದ ಈ ಬಗ್ಗೆ ಇಲ್ಲಿನ ರೈತ ಸಮುದಾಯ ಹಾಗೂ ರೈತಧ್ವನಿ ಸಂಘ ಕೋಟ ಇವರ ಪ್ರಬಲ ಹೋರಾಟದ ಫಲವಾಗಿ ಯೋಜನೆಗೆ ಸರಕಾರ ಅಸ್ತು ಎಂದಿದೆ.
ಇದರ ಭಾಗವಾಗಿ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರಕಾರದ ಉಪಮುಖ್ಯಮಂತ್ರಿಗಳನ್ನು ಭೇಟಿಯಾದ ಕೋಟದ ರೈತಧ್ವನಿ ಸಂಘದ ನಿಯೋಗ ಸರಕಾರಕ್ಕೆ ಮನವಿ ಮಾಡಿತು. ತಕ್ಷಣ ಸ್ಪಂದಿಸಿದ ಉಪಮುಖ್ಯಮಂತ್ರಿ ಬೃಹತ್ ನೀರಾವರಿ ಸಚಿವ ಡಿ. ಕೆ. ಶಿವಕುಮಾರ್ ಹೂಳೆತ್ತುವ ಯೋಜನಾ ಪತ್ರಕ್ಕೆ ಸಹಿ ಹಾಕಿದ್ದಾರೆ.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಸಾಥ್ ನೀಡಿದರು. ನಿಯೋಗದ ನೇತೃತ್ವವನ್ನು ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ವಹಿಸಿದ್ದು ಸರಕಾರ ಪರವಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಸಾರಥ್ಯ ವಹಿಸಿದ್ದರು. ರೈತಧ್ವನಿ ಸಂಘದ ಪ್ರಮುಖರಾದ ಟಿ.ಮಂಜುನಾಥ್ ಗಿಳಿಯಾರು,ತಿಮ್ಮ ಪೂಜಾರಿ,ಭಾಸ್ಕರ್ ಶೆಟ್ಟಿ, ಸುಭಾಷ್ ಶೆಟ್ಟಿ, ಮಹೇಶ್ ಶೆಟ್ಟಿ, ಪ್ರತಾಪ್ ಶೆಟ್ಟಿ ಸಾಸ್ತಾನ,ನಾಗರಾಜ್ ಗಾಣಿಗ ಸಾಲಿಗ್ರಾಮ, ಮಹಾಬಲ ಪೂಜಾರಿ,ಗುಳ್ಳಾಡಿ ಸತೀಶ್ ಶೆಟ್ಟಿ, ಶ್ರವಣ್ ಕುಮಾರ್ ಶೆಟ್ಟಿ, ಹಂಡಿಕೆರೆ ರಾಘವೇಂದ್ರ ಶೆಟ್ಟಿ,ತಿಮ್ಮ ಕಾಂಚನ್,ಬಾಬು ಶೆಟ್ಟಿ,ಶರಣಯ್ಯ ಹಿರೇಮಠ್ ಮತ್ತಿತರರು ಇದ್ದರು

 

Related Articles

error: Content is protected !!