ಕೋಟೇಶ್ವರ : ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಬಳಿಯ ಭಾರತ್ ಸಿನಿಮಾಸ್ ಬಳಿಯಲ್ಲಿರುವ ಅಟೋ ಗ್ಯಾಸ್ ಬಂಕ್ ಬಳಿ ನಿಲ್ಲಿಸಿದ್ದ ಟ್ಯಾಂಕರಿನಿಂದ ಗ್ಯಾಸ್ ಸೋರಿಕೆಗೊಂಡು ನಾಗರಿಕರಲ್ಲಿ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ
ಕೋಟೇಶ್ವರ ಅಟೋ ಗ್ಯಾಸ್ ಬಂಕಿಗೆ ಗ್ಯಾಸ್ ತುಂಬಿಸಲು ಆಗಮಿಸಿದ ಗ್ಯಾಸ್ ಟ್ಯಾಂಕರಿನಿಂದ ಸೋರಿಕೆಯಾದ ಗ್ಯಾಸ್ ನಿಯಂತ್ರಣಕ್ಕೆ ಬಾರದೇ ಕೋಟೇಶ್ವರದ ಹಲವು ಭಾಗಗಳಿಗೆ ಹಬ್ಬಿತು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮುನ್ನೆಚ್ಚರಿಕೆಯ ಕ್ರಮವಾಗಿ ಸರ್ವೀಸ್ ರಸ್ತೆಗಳಲ್ಲಿ ದ್ವಿಚಕ್ರ ಹಾಗೂ ಇನ್ನಿತರ ವಾಹನಗಳನ್ನು ಬಂದ್ ಮಾಡಿಕೊಂಡು ತೆರಳು ಸೂಚಿಸಿದರು ಈ ಮಧ್ಯೆ ಗ್ಯಾಸ್ ಸೋರಿಕೆಯ ಸುದ್ದಿ ತಿಳಿದ ಅನೇಕ ಪೋಷಕರು ಸಮೀಪದ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋದ ಪ್ರಸಂಗವು ನಡೆಯಿತು ಗ್ಯಾಸ್ ಸೋರಿಕೆಯಂದ ದೊಡ್ಡ ಅನಾಹುತವೊಂದು ತಪ್ಪಿದ್ದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ