ಕುಂದಾಪುರ : ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ಮೊಗವೀರ ಸಮಾಜ ಬಾಂಧವರ 20 ಜೋಡಿಗಳ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ ನಾಳೆ ಏಪ್ರಿಲ್ 5 ರಂದು ಕುಂದಾಪುರದ ಚಿಕ್ಕನ್‍ಸಾಲ್ ರಸ್ತೆಯಲ್ಲಿರುವ ಮೊಗವೀರ ಭವನದಲ್ಲಿ ವೀಳ್ಯಶಾಸ್ತ್ರ ಮತ್ತು ವಧೂವರರಿಗೆ ಉಡುಗೆ ತೊಡುಗೆ ವಿತರಣಾ ಸಮಾರಂಭ ನಡೆಯಲಿದೆ.
ವಧುವಿಗೆ ಕಾಲುಂಗುರ, ಸೀರೆ, ರವಿಕೆ ಕಣ, ವರನಿಗೆ ಕುರ್ತಾ ಪೈಜಾಮ ಸಹಿತ ಉಡುಗೊರೆಯನ್ನು ಸಂಘಟನೆ ವತಿಯಿಂದ ನೀಡಲಾಗುವುದು. ವಧುವಿಗೆ ತಾಳಿ ಸರವನ್ನು ವಿವಾಹ ಸಂದರ್ಭ ನಾಡೋಜ ಡಾ. ಜಿ. ಶಂಕರ್ ದಂಪತಿ ನೀಡುವರು ಎಂದು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ರಾಜೇಂದ್ರ ಸುವರ್ಣ ತಿಳಿಸಿದ್ದಾರೆ.