ಬೆಂಗಳೂರು : ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲ ಬಳಿ ಕಂಟೈನರ್ವೊಂದು ವೋಲ್ವೋ ಕಾರಿನ ಮೇಲೆ ಬಿದ್ದು ಇಬ್ಬರು ಮಕ್ಕಳು ಸೇರಿ ಐಟಿ ಉದ್ಯಮಿ ಅವರ ಕುಟುಂಬದ 6 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48ರ ತಿಪ್ಪಗೊಂಡನ ಹಳ್ಳಿ-ತಾಳೇಕೆರೆ ಗೇಟ್ ಬಳಿ, ಶನಿವಾರ 11.00 ಗಂಟೆಯ ಸಮಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ
ಬೆಂಗಳೂರಿನ ಐಟಿ ಉದ್ಯಮಿ ಚಂದ್ರಮ್ ಯೇಗಪ್ಪಗೋಳ (48), ಗೌರಾಬಾಯಿ (42),ಜಾನ್ (16), ದೀಕ್ಷಾ (12), ಆರ್ಯಾ (6), ವಿಜಯಲಕ್ಷ್ಮೀ (36) ಮೃತರು. ಇವರು ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದವರು. ಬೆಂಗಳೂರಿನ ಎಚ್ಎಸ್ಆರ್ ಲೇ ಔಟಲ್ಲಿ ವಾಸವಾಗಿದ್ದರು.
2 ತಿಂಗಳ ಹಿಂದಷ್ಟೇ ಚಂದ್ರಮ್ 1 ಕೋಟಿ ರು. ಮೌಲ್ಯದ ವೋಲ್ವೋ ಕಾರು ಖರೀದಿಸಿದ್ದು, ಅದರ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂ ಡಿದ್ದರು ಎನ್ನಲಾಗಿದೆ.