ಕುಂದಾಪುರ : ನಗರದ ಮಧ್ಯ ಕೋಡಿಯ ಸೌಹಾರ್ದ ಭವನದ ಎದುರುಗಡೆ ಅಂಬರ್ ಗ್ರೀಸ್ ಕಳ್ಳಸಾಗಾಟ ಶೋಧ ನಡೆಸಲು ಆಗಮಿಸಿದ್ದ ಅರಣ್ಯ ಸಂಚಾರಿ ದಳದ ಮಂಗಳೂರು ವಿಭಾಗದ ಪಿಎಸ್‌ಐ ಸಹಿತ ಐವರು ಅಧಿಕಾರಿಗಳಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತ ಕೋಡಿ ಗ್ರಾಮದ ಅಬೂಬಕ್ಕರ್, ಹಸೈನಾರ್, ಉಬೇದುಲ್ಲಾ ಹಾಗೂ ಬೈಂದೂರು ನಿವಾಸಿ ಮಹಮ್ಮದ್ ಆಲಿ ಎಂಬವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶನಿವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ