ಕೋಟ : ಮಹಿಷ ಮರ್ಧಿನಿ ದೇವಸ್ಥಾನ ಬೈಲೂರು,ಇಲ್ಲಿ ನಡೆಯಲಿರುವ ಕೋಟಿ ಗಾಯತ್ರೀ ಜಪ ಯಜ್ಞ ಹಾಗು ಚಂಡಿಕಾಯಾಗದ ಪ್ರಯುಕ್ತ ಸರ್ವ ಮಂಗಲ ಮಾಂಗಲ್ಯೆ ಸ್ತೋತ್ರ ಪಠಣವು, ವಿಪ್ರ ಮಹಿಳಾ ಸಾಲಿಗ್ರಾಮ ವಲಯದ ವತಿಯಿಂದ ಕೋಟದ ಅಮ್ರತೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಮಹಿಳಾ ವೇದಿಕೆ ಸಂಚಾಲಕಿ ಶಾಂತಾ ಗಣೇಶ್,ನಿವೃತ್ತ ಶಿಕ್ಷಕ ಕೋಟ ಜನಾರ್ಧನ ಹಂದೆ,ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಅಧ್ಯಕ್ಷೆ ವನಿತಾ ಉಪಾಧ್ಯ,ಬ್ರಹ್ಮಾವರ ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಮಂಜುಳಾ ಅಡಿಗ,ಬಳಗದ ಸುಜಾತ ಬಾಯರಿ,ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಚಂದ್ರ ಆಚಾರ್ ಮತ್ತಿತರರು ಇದ್ದರು