ಲಂಪೂರ್ : ತ್ರಿಶಾ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಶುಕ್ಲಾ ಅವರ ಮಾರಕ ಬೌಲಿಂಗ್ ದಾಳಿಯ ಪರಿಣಾಮ ಇಲ್ಲಿ ನಡೆದ ಅಂಡರ್ 19 ಏಷ್ಯಾಕಪ್ ಮಹಿಳಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರು ಭರ್ಜರಿ ಗೆಲುವು ಸಾಧಿಸಿದರು. ಆ ಮೂಲಕ ಏಳೆಯರ ಬಳಗ ಏಷ್ಯಾದ ಉತ್ತಮ ತಂಡವಾಯಿತು. ಟೂರ್ನಿಯುದ್ದಕ್ಕೂ ಭಾರೀ ಪ್ರದರ್ಶನ ನೀಡಿದ ಭಾರತ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಬೌಲಿಗರು ಪ್ರಮುಖ ಪಾತ್ರ ವಹಿಸಿದರು.