Home » ಮನೆಗೆ ನುಗ್ಗಿ ಚಿನ್ನಾಭರಣ ಕಳವು
 

ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಕುಂದಾಪುರದಲ್ಲಿ

by Kundapur Xpress
Spread the love

ಕುಂದಾಪುರ : ಮನೆಯ ಬಾಗಿಲಿನ ಬೀಗ ಒಡೆದು ಯಾರೋ ಕಳ್ಳರು ಮನೆಯ ಒಳ ನುಗ್ಗಿ ಅಂದಾಜು 18.52 ಲಕ್ಷರೂ, ಚಿನ್ನಾಭರಣ ಕಳವುಗೈದ ಘಟನೆ ಇಲ್ಲಿನ ವಡೇರ ಹೋಬಳಿ ಗ್ರಾಮದ ಜೆಎಲ್‌ಬಿ ರಸ್ತೆಯ ಮನೆಯಲ್ಲಿ ನಡೆದಿದೆ

ಶಿವರಾಮ್ ಅವರ ಶ್ರೀ ತುಂಗಾ ಎನ್ನುವ ಹೆಸರಿನ ಮನೆಯಲ್ಲಿ ಕಳ್ಳತನವಾಗಿದ್ದು, ಶಿವರಾಮ್ ಹಾಗೂ ಅವರ ಪತ್ನಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದಾಗ ಈ ಕೃತ್ಯ ಸಂಭವಿಸಿದೆ. ಮನೆಯ ಒಳಗಡೆ ರೂಮ್‌ನಲ್ಲಿದ್ದ ಸುಮಾರು 142 ಗ್ರಾಂ ತೂಕದ ವಿವಿಧ ಬಗೆಯ ಅಂದಾಜು 8,52 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 8 ಲಕ್ಷ ರೂ. ಮೌಲ್ಯದ 40 ಗ್ರಾಂ ವಜ್ರದ ಆಭರಣಗಳು, 2 ಲಕ್ಷ ರೂ. ನಗದನ್ನು ಕಳ್ಳತನಗೈದಿರುವುದಾಗಿದೆ. ಒಟ್ಟಾರೆ 18.52 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ. ಈ ಕುರಿತಂತೆ ಶಿವರಾಮ್ ಅವರ ಸ್ನೇಹಿತ ಗಣೇಶ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!