ಕೋಟ : ಧಾರ್ಮಿಕ ಹಾಗೂ ಸಾಂಸ್ಕöÈತಿಕ,ಸಾಮಾಜಿಕವಾಗಿ ಗುರುತಿಸಿಕೊಂಡ ಇಲ್ಲಿನ ಬ್ರಹ್ಮಾವರದ ಶ್ರೀ ಶಾಂತಿಮತೀ ಪ್ರತಿಷ್ಠಾನ ಸಂಸ್ಥೆ ಪ್ರತಿವರ್ಷ ವಾರ್ಷಿಕೋತ್ಸವದಲ್ಲಿ ನೀಡುವ ಶ್ರೀ ಶಾಂತಿಮತೀ 2024 ಪುರಸ್ಕಾರಕ್ಕೆ ಶೃಂಗೇರಿಯ ಋಗ್ವೇದ ಸಲಕ್ಷಣ ಘನಪಾಠಿ ಬಿ.ಕೆ ಲಕ್ಷ್ಮೀ ನಾರಾಯಣ ಭಟ್ಟ ಇವರನ್ನು ಆಯ್ಕೆಮಾಡಲಾಗಿದೆ.
ವಾರ್ಷಿಕೋತ್ಸವ ಕಾರ್ಯಕ್ರಮ ಇದೇ ಬರುವ ಜನವರಿ 11ರಂದು ಕೋಟದಲ್ಲಿ ಜರಗಲಿದ್ದು, ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕೈಂಕರ್ಯ ನೆರವೆರಿಸಿ ಅಪರಾಹ್ನ 11.00ಗ ಮಾಂಗಲ್ಯ ಮಂದಿರದಲ್ಲಿ ಈ ಪುರಸ್ಕಾರ ಸಮಾರಂಭ ನೆರವೇರಲಿದೆ.ಎಂದು ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ವಡ್ಡರ್ಸೆ ಸಚ್ಚಿದಾನಂದ ಅಡಿಗ ಮಾಜಿ ಅಧ್ಯಕ್ಷ ವಿಜಯ ಮಂಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.