ಢಾಕಾ : ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಢಾಕಾಗೆ ಮರಳಿ ಕಳುಹಿಸುವಂತೆ ಭಾರತಕ್ಕೆ ರಾಜತಾಂತ್ರಿಕ ಪತ್ರವೊಂದನ್ನು ಕಳುಹಿಸಿರುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೋಮವಾರ ತಿಳಿಸಿದೆ.
ಬಾಂಗ್ಲಾದಲ್ಲಿ 16 ವರ್ಷಗಳ ಆಡಳಿತ ನಡೆಸಿರುವ 77 ವರ್ಷದ ಹಸೀನಾ, ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳ ಮಧ್ಯೆ ದೇಶದಿಂದ ಪಲಾಯನ ಮಾಡಿದ ಬಳಿಕ ಆಗಸ್ಟ್ 5 ರಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾದೇಶ ಮೂಲದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯ ಮಂಡಳಿ (ಐಸಿಟಿ) ಹಸೀನಾ ಮತ್ತು ಹಲವಾರು ಮಾಜಿ ಕ್ಯಾಬಿನೆಟ್ ಮಂತ್ರಿಗಳು, ಸಲಹೆಗಾರರು ಮತ್ತು ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳಿಗೆ ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧಕ್ಕಾಗಿ ಬಂಧನ ವಾರಂಟ್ ಹೊರಡಿಸಿದೆ. ಬಾಂಗ್ಲಾದೇಶದ ಗೃಹ ಸಲಹೆಗಾರ ಜಹಾಂಗೀರ್ ಆಲಂ, ಢಾಕಾ ಮತ್ತು ಹೊಸದಿಲ್ಲಿಯ ನಡುವೆ ಈಗಿರುವ ಹಸ್ತಾಂತರ ಒಪ್ಪಂದದಲ್ಲಿ ಹಸೀನಾ ಬಾಂಗ್ಲಾದೇಶಕ್ಕೆ ಮರಳಿ ತರಬಹುದು ಎಂದಿದ್ದಾರೆ.