Home » ಕರಾಟೆಯಲ್ಲಿ ರಾಷ್ಟ್ರದ ಮಹೋನ್ನತ ಸಾಧನೆ ಗಳಿಸಿದ ನವಮಿ ಎಸ್ ಶೆಟ್ಟಿ
 

ಕರಾಟೆಯಲ್ಲಿ ರಾಷ್ಟ್ರದ ಮಹೋನ್ನತ ಸಾಧನೆ ಗಳಿಸಿದ ನವಮಿ ಎಸ್ ಶೆಟ್ಟಿ

ಎಕ್ಸಲೆಂಟ್ ಕುಂದಾಪುರ

by Kundapur Xpress
Spread the love

ಕುಂದಾಪುರ :  ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಸುಣ್ಣಾರಿ, ಕುಂದಾಪುರವು ಒಂದರ ನಂತರ ಒಂದು ಅದ್ಭುತ ಸಾಧನೆ ಮಾಡುತ್ತ ಹೊಸ ಶಕೆಯನ್ನು ನಿರಂತರ ಮಾಡುತ್ತಾ ಬಂದಿರುವ ಗ್ರಾಮೀಣ ಭಾಗದ ಹೆಗ್ಗಳಿಕೆಯ ವಿದ್ಯಾಸಂಸ್ಥೆಯಾಗಿದೆ. ಈ ವಿದ್ಯಾಸಂಸ್ಥೆಯು  ಕೇವಲ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಗುರುತಿಸಿಕೊಂಡು ಬಂದಿರುವುದು ಮಾತ್ರವಲ್ಲದೇ ಕ್ರೀಡಾಕ್ಷೇತ್ರದಲ್ಲಿ ಒಂದರ ಮೇಲೆ ಒಂದು ಸಾಧನೆಯನ್ನು ಮಾಡುತ್ತಾ ಬಂದಿರುವುದು ಗಮನಾರ್ಹ. ವಾಲಿಬಾಲ್, ಪುಟ್ಬಾಲ್, ಹ್ಯಾಂಡ್‌ಬಾಲ್, ಚೆಸ್ ಮಾತ್ರವಲ್ಲದೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಈಡೀ ರಾಷ್ಟ್ರ ವೇ ಗುರುತಿಸುವಂತೆ ಮಾಡಿದ್ದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಾಧನೆಯ ಗರಿಮೆಗೆ ಹೊಸ ಅಧ್ಯಾಯ ಬರೆದಂತಾಗಿದೆ. ಈ ಸಾಧನೆಯ ಗರಿಮೆಯ ತೂಕವನ್ನು ಹೆಚ್ಚಿಸಿದ್ದು ನಮ್ಮ ವಿದ್ಯಾಸಂಸ್ಥೆಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಹೆಮ್ಮೆಯ ವಿದ್ಯಾರ್ಥಿನಿ ನವಮಿ ಎಸ್ ಶೆಟ್ಟಿ.

 ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸಿದ 68ನೇ ರಾಷ್ಟ್ರೀಯ ‘ಕರಾಟೆ ಸ್ಪರ್ಧೆ’ 2024-25ರ ಸಾಲಿನ ಈ ಕರಾಟೆ ಸ್ಪರ್ಧೆಯು ಮಧ್ಯಪ್ರದೇಶದ ರಾಜ್ಯದ ಇಂದೋರ್‌ನಲ್ಲಿ ಬಹಳ ಅದ್ಧೂರಿಯಾಗಿ ಜರುಗಿತು. ಕರ್ನಾಟಕ ತಂಡದ ಪರವಾಗಿ ನಮ್ಮ ವಿದ್ಯಾಸಂಸ್ಥೆಯ ನವಮಿ ಎಸ್ ಶೆಟ್ಟಿ ಅವರು 65 ಕೆಜಿ ‘ಕುಮಟೆ’ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಈಡೀ ಕ್ರೀಡಾವಲಯದಲ್ಲಿ ಕರ್ನಾಟಕ ರಾಜ್ಯವು ಹೆಮ್ಮೆ ಪಡುವಂತೆ ಮಾಡಿದ್ದು ಎಕ್ಸಲೆಂಟ್ ಹೆಮ್ಮೆಯ ವಿಚಾರ.  ಕರ್ನಾಟಕ ತಂಡದ ಪರವಾಗಿ ನಮ್ಮ ಎಕ್ಸಲೆಂಟ್ ವಿದ್ಯಾರ್ಥಿನಿಯು ಭಾಗವಹಿಸಿ ವಿಜೇತರಾಗಿರುವುದು ಈಡೀ ದೇಶದಲ್ಲಿಯೇ ಎಕ್ಸಲೆಂಟ್‌ನ ಸಾಧನೆಯನ್ನು ಗುರುತಿಸುವಂತಾಗಿದೆ. ಈ ನಮ್ಮ ವಿದ್ಯಾರ್ಥಿಯು ಈ ಹಿಂದೆ ನಡೆದಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ರಾಘವೇಂದ್ರ ಹೈ-ಟೆಕ್ ಪದವಿ ಪೂರ್ವ ಕಾಲೇಜು, ದಾವಣಗೆರೆ ಇದರ ಸಂಯುಕ್ತ ಆಶ್ರಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯ 65 ಕೆಜಿ ‘ಕುಮಟೆ’ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಈ ಹಿಂದೆ ಆಯ್ಕೆಯಾಗಿರುವುದು ಗಮನಾರ್ಹ. ಈಗ ಈಡೀ ರಾಷ್ಟ್ರ ದಲ್ಲಿಯೇ ದ್ವಿತೀಯ ಸ್ಥಾನ ಪಡೆದಿರುವುದು ಸಂಸ್ಥೆಯ ಕೀರ್ತಿಯನ್ನು ರಾಷ್ಟ್ರ ದಲ್ಲಿ ಗುರುತಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ.

ಈ ಅತ್ಯುತ್ತಮ ಸಾಧನೆ ಮಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಹೆಮ್ಮೆಯ ಕ್ರೀಡಾಪಟುವಾದ ನವಮಿ ಎಸ್ ಶೆಟ್ಟಿ ಅವರಿಗೆ ಎಕ್ಸಲೆಂಟ್‌ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಕಾರ್ಯದರ್ಶಿಗಳು ಹಾಗೂ ಬೋಧಕ – ಬೋಧಕೇತರ ಸಿಬ್ಬಂಧಿಗಳು, ಈ ವಿದ್ಯಾರ್ಥಿಯ ಮುಂದಿನ ಕ್ರೀಡಾ ಭವಿಷ್ಯಯು ಉಜ್ವಲವಾಗಲಿ ಎಂದು ಹರಸಿ, ಅಭಿನಂದನೆ ಸಲ್ಲಿಸಿದ್ದಾರೆ

 

Related Articles

error: Content is protected !!