ಹೊಸದಿಲ್ಲಿ : ಬಾಹ್ಯಾಕಾಶಕ್ಕಾಗಿ ಭಾರತ ಖರ್ಚು ಮಾಡಿದ ಪ್ರತಿ ಒಂದು ರೂಪಾಯಿಗೆ ಪ್ರತಿಯಾಗಿ 2.52 ರೂ.ಗಳ ಆದಾಯ ಪಡೆದಿದೆ ಎಂದು ಇಸ್ರೋ ಮುಖ್ಯಸ್ಥ ಡಾ.ಎಸ್. ಸೋಮನಾಥ್ ಹೇಳಿದ್ದಾರೆ. ಮಂಗಳವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು 250ಕ್ಕೂ ಹೆಚ್ಚು ಬಾಹ್ಯಾಕಾಶ ಸ್ಟಾರ್ಟ್ ಅಪ್ ಗಳು ನಾವೀನ್ಯತೆಯನ್ನು ಮುನ್ನಡೆಸುತ್ತಿವೆ. ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಇಂಧನ ನೀಡುತ್ತಿವೆ. ಈ ಮೂಲಕ ಬಾಹ್ಯಾಕಾಶಕ್ಕಾಗಿ ಖರ್ಚು ಮಾಡಿದ ಪ್ರತಿ ಒಂದು ರೂಪಾಯಿಗೆ ಭಾರತವು 2.52 ರೂ.ಗಳ ಆದಾಯ ಗಳಿಸಿದೆ ಎಂದು ಸೋಮನಾಥ್ ತಿಳಿಸಿದರು. 2040ರ ವೇಳೆಗೆ ಚಂದ್ರನಂಗಳಕ್ಕೆ ಗಗನಯಾತ್ರಿಯನ್ನು ಕಳುಹಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮಕ್ಕೆ ಇಸ್ರೋ ಸಿದ್ದತೆ ನಡೆಸಿದೆ ಎಂದೂ ಅವರು ಹೇಳಿದರು.