Home » 4 ಗಂಟೆ ನಟ ಅಲ್ಲು ವಿಚಾರಣೆ
 

4 ಗಂಟೆ ನಟ ಅಲ್ಲು ವಿಚಾರಣೆ

ಮಹಿಳೆ ಸಾವಿನ ಪ್ರಕರಣ

by Kundapur Xpress
Spread the love

ಹೈದರಾಬಾದ್‌ : ಪುಷ್ಪ-2 ಚಿತ್ರ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ ಪ್ರಕರಣದ ಸಂಬಂಧ ಸ್ಥಳೀಯ ಪೊಲೀಸರು ಮಂಗಳವಾರ ಸತತ 4 ತಾಸು ನಟ ಅಲ್ಲು ಅರ್ಜುನ್‌ರ ವಿಚಾರಣೆ ನಡೆಸಿದ್ದಾರೆ.

ತಂದೆ ಜತೆ ಚಿಕ್ಕಡಲ್ಲಿ ಪೊಲೀಸ್ ಠಾಣೆಗೆ ಆಗಮಿಸಿದ ಅರ್ಜು ನ್‌ರನ್ನು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2:45ರ ವರೆಗೆ ವಿಚಾರಣೆ ನಡೆಸಿ, ಥಿಯೇಟರ್ ಪ್ರವೇಶಕ್ಕೆ ಅನುಮತಿ ನಿರಾಕರಣೆ ಬಗ್ಗೆ ಅವರಿಗಿದ್ದ ಮಾಹಿತಿ, ನಿರ್ಗಮನೆ, ವೈಯಕ್ತಿಕ ಭದ್ರತೆ, ಅಭಿಮಾನಿಗಳೊಂದಿಗೆ ಬೌನ್ಸರ್ ವರ್ತನೆ, ಕಾಲ್ತುಳಿತದ ಬಗ್ಗೆ ಅವರಿಗಿದ್ದ ಮಾಹಿತಿ ಇತ್ಯಾದಿಗಳ ಕುರಿತು ಪ್ರಶ್ನಿಸಲಾಯಿತು.

ವಿಚಾರಣೆಯುದ್ದಕ್ಕೂ ನಟ ಪೊಲೀಸರೊಂದಿಗೆ ಸಹಕರಿಸಿದ್ದು ಅಗತ್ಯವಿದ್ದರೆ ಮತ್ತೆ ಕರೆಸಿಕೊಳ್ಳಲಾಗುವುದು’ ಎಂದು ಅಲ್ಲು ಪರ ವಕೀಲ ತಿಳಿಸಿದರು.

ಅಲ್ಲು ಅರ್ಜುನ್‌ರ ಬೌನ್ಸರ್ ಅರೆಸ್ಟ್ :

ಕಾಲ್ತುಳಿತದ ವೇಳೆ ಅಭಿಮಾನಿಗಳೊಂದಿಗೆ ಒರಟಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್‌ರ ಬೌನ್ಸರ್ ಆದ ಆ್ಯಂಟನಿಯನ್ನು ಬಂಧಿಸಲಾಗಿದೆ.

 

Related Articles

error: Content is protected !!