ಗಂಗೊಳ್ಳಿ : ಕರಾವಳಿ ಕಾವಲು ಪಡೆ ಗಂಗೊಳ್ಳಿ ಪೊಲೀಸ್ ಠಾಣೆ ವತಿಯಿಂದ ರೋಟರಿ ಕ್ಲಬ್ ಸಹಯೋಗದೊಂದಿಗೆ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಗಂಗೊಳ್ಳಿಯ ಮುಖ್ಯ ಬೀದಿಯಲ್ಲಿ ಜನಜಾಗೃತಿ ಜಾಥಾ ಶನಿವಾರ ನಡೆಯಿತು.
ಪೋಸ್ಟ್ ಆಫೀಸ್ ಬಳಿಯಿಂದ ಪ್ರಾರಂಭವಾದ ಜನಜಾಗೃತಿ ಜಾಥಾ ಮುಖ್ಯರಸ್ತೆ ಮೂಲಕ ಎಸ್.ವಿ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ತನಕ ನಡೆಯಿತು. ಜಾಥಾದಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ಸಿಬ್ಬಂದಿ, ಕೆಎನ್‌ಡಿ ಸಿಬ್ಬಂದಿ, ಎಸ್.ವಿ. ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ, ಉರ್ದು ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಕಿರಿಯ ಪ್ರಾಥಮಿಕ (ರಥಬೀದಿ) ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎಸ್.ವಿ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಟಿ. ವಿಮಲಾ ವಿ.ಪೈ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ಉಪನಿರೀಕ್ಷಕ ಸುಬ್ರಹ್ಮಣ್ಯ ಹರ್ಕೇರಿ, ಮುಕ್ತಬಾಯಿ, ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ತಾಂಡೇಲ್, ಶಾಲೆಯ ಮುಖ್ಯ ಶಿಕ್ಷಕ ಜಿ.ವಿಶ್ವನಾಥ ಭಟ್, ಸಾಮಾಜಿಕ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್, ಎಎಸ್‌ಐ ಬಾಬು ಪೂಜಾರಿ ಇದ್ದರು. ಕರಾಟೆ ಗುರು ಅಶೋಕ್ ಕುಲಾಲ್ ಮಕ್ಕಳಿಗೆ ಸ್ವರಕ್ಷಣೆ ಪ್ರಾತ್ಯಕ್ಷಿಕೆ ನೀಡಿದರು. ಆರೋಗ್ಯ ಕೇಂದ್ರ ಸಿಎಚ್ ಒ ನಯನಾ ತಾಂಡೆಲ್ ಪ್ರಥಮ ಚಿಕಿತ್ಸೆ ಮಾಹಿತಿ ನೀಡಿದರು. ಪೊಲೀಸ್ ಸಿಬ್ಬಂದಿ ನಾಗರಾಜ್ ಖಾರ್ವಿ ನಿರೂಪಿಸಿ, ವಂದಿಸಿದರು
ಈ ಸಂದರ್ಭದಲ್ಲಿ ಎಲ್ಲ ಬ್ಯಾಂಕ್, ಸೊಸೈಟಿ ಹಾಗೂ ಜುವೆಲ್ಲರಿ ಅಂಗಡಿಗಳಿಗೆ ಭೇಟಿ ನೀಡಿದ ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್ ಚಿನ್ನ ಬೆಳ್ಳಿ ಅಡಮಾನ ಇರಿಸಿವಾಗ ದಾಖಲೆ ಪರಿಶೀಲಿಸಿ ಪಡೆಯುವುದು ಅಲ್ಲದೆ ರೆಜಿಸ್ಟರ್ ಮೆಂಟೈನ್ ಮಾಡುವ ಬಗ್ಗೆ ತಿಳಿಸಿ ಜನ ಜಾಗೃತಿ ಮೂಡಿಸಿದರು