ಕುಂದಾಪುರ : ಕುಂದಾಪುರ ನಗರದ ಹೊಸ ಬಸ್ಟ್ಯಾಂಡಿನಿಂದ ಉಡುಪಿ ಕಡೆಗೆ ಹೊರಟಿದ್ದ ಎಕ್ಸಪ್ರೆಸ್ ಬಸ್ ಹತ್ತಿದ ಓರ್ವ ಪ್ರಯಾಣಿಕರಿಗೆ ಕೆಲವೇ ನಿಮಿಷಗಳಲ್ಲಿ ತೀವ್ರ ಪ್ರಮಾಣದ ಹೃದಯಾಘಾತವಾದ ಘಟನೆ ನಡೆದಿದೆ
ಕುಂದಾಪುರದಿಂದ ಉಡುಪಿ ಕಡೆಗೆ ಹೊರಟಿದ್ದ ಸಮತಾ ಬಸ್ಸಿನಲ್ಲಿ ಕುಳಿತಿದ್ದ ಕೋಟ ನಿವಾಸಿಯಾದ ವೆಂಕಟ್ ಎಂಬವರಿಗೆ ಮುಖ್ಯ ರಸ್ತೆಯ ಯು ಬಿ ಯಂ ಸಿ ಶಾಲೆಯ ಎದುರುಗಡೆಯಲ್ಲಿ ತೀವ್ರ ಪ್ರಮಾಣದ ಹೃದಯಾಘಾತದಿಂದ ತನ್ನ ಕಣ್ಣನ್ನು ಮುಚ್ಚಿದ್ದು ಮಾತನಾಡಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದೇ ಅಸ್ವಸ್ಥರಾಗಿದ್ದರು
ಇದನ್ನು ಮನಗಂಡ ಕಂಡಕ್ಟರ್ ತಕ್ಷಣ ಡ್ರೈವರ್ ರಿತೇಶ್ ರವರಿಗೆ ವಿಷಯವನ್ನು ತಿಳಿಸಿದ್ದು ತಕ್ಷಣ ಸಮತಾ ಬಸ್ಸಿನ ಡ್ರೈವರ್ ರಿತೇಶ್ ಎಂಬುವರು ಬಸ್ಸನ್ನು ಎಲ್ಲೂ ನಿಲ್ಲಿಸದೇ ನೇರಾ ಪಾರಿಜಾತ ಸರ್ಕಲ್ ಬಳಿ ಇರುವ ವಿನಯ ಹಾಸ್ಪಿಟಲ್ ಎದುರಲ್ಲಿ ಬಸ್ಸನ್ನು ನಿಲ್ಲಿಸಿದ್ದಾರೆ ಅಲ್ಲೇ ಇದ್ದ ರಿಕ್ಷಾ ಚಾಲಕರ ನೆರವಿನಿಂದ ಅವರನ್ನು ವಿನಯಾ ಆಸ್ಪತ್ರೆಗೆ ದಾಖಲಿಸಲಾಯಿತು
ಅಲ್ಲಿಯ ವೈದ್ಯರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣ ಅಂಬುಲೆನ್ಸ್ ಮೂಲಕ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ
ಬಸ್ ಕಂಡಕ್ಟರ್ ಮತ್ತು ಡ್ರೈವರ್ ಅವರ ಸಮಯಪ್ರಜ್ಞೆಗೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ