ಕುಂದಾಪುರ : ಶ್ರೀನಗರದಪೊಂಚ್ ಜಿಲ್ಲೆಯ ಬಲ್ಲೋಯ್ ಪ್ರದೇಶದಲ್ಲಿ ಮಂಗಳವಾರ ಸೇನಾ ವಾಹನ 350 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ವೀರಗತಿ ಹೊಂದಿದ ಕುಂದಾಪುರ ಸಮೀಪದ ಬೀಜಾಡಿ ನಿವಾಸಿಯಾದ ಅನೂಪ್ ಪೂಜಾರಿಯವರ ಮೃತದೇಹ ನಾಳೆ ಬೆಳಿಗ್ಗೆ 8.00 ಗಂಟೆಗೆ ಅವರ ಬೀಜಾಡಿಯ ಸ್ವಗೃಹಕ್ಕೆ ಆಗಮಿಸಲಿದೆ ಎಂದು ಸೇನಾ ಮೂಲಗಳು ತಿಳಿಸಿದೆ
ಇಂದು ರಾತ್ರಿ 12.00 ಗಂಟೆಗೆ ಅವರ ಮೃತದೇಹವು ವಿಮಾನದ ಮೂಲಕ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ರಾತ್ರಿ ಅವರ ಮೃತದೇಹವನ್ನು ಉಡುಪಿಯಲ್ಲಿ ಇರಿಸಲಾಗುತ್ತದೆ
ಬಿಲ್ಲವ ಸಮಾಜ ಸೇವಾ ಸಂಘದಿಂದ ನಡೆದ ಸನ್ಮಾನ
ನಾಳೆ ಬೆಳಿಗ್ಗೆ 8.00 ಗಂಟೆ ಕೋಟೇಶ್ವರ ಸಮೀಪದ ಬೀಜಾಡಿಯ ಅವರ ಸ್ವಗೃಹದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರೀಯೆ ನಡೆಯಲಿದ್ದು 10.00 ಗಂಟೆಗೆ ಮೆರವಣಿಗೆ ನಡೆಯಲಿದೆ