Home » ಜೇಸಿ ಅಶೋಕ್ ತೆಕ್ಕಟ್ಟೆ ಆಯ್ಕೆ
 

ಜೇಸಿ ಅಶೋಕ್ ತೆಕ್ಕಟ್ಟೆ ಆಯ್ಕೆ

ಜೇಸಿ ಕಮಲಪತ್ರ ಪ್ರಶಸ್ತಿ ಗೌರವ

by Kundapur Xpress
Spread the love

ಕುಂದಾಪುರ : ಭಾರತೀಯ ಜೇಸಿಸ್ ನ ವಲಯ 15 ರ ಹಿರಿಯ ಹಾಗೂ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಕುಂದಾಪುರದ ಸುವರ್ಣ ಸಂಭ್ರಮ ನಾಟಕೋತ್ಸವ ಕಾರ್ಯಕ್ರಮವು ಕುಂದಾಪುರದ ರೋಟರಿ ಕಲಾಮಂದಿರದಲ್ಲಿ ಜರುಗಲಿದ್ದು ಸಮಾರೋಪ ಸಮಾರಂಭದಲ್ಲಿ ಜೇಸಿಐ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಘಟಕ ಮಟ್ಟದ ಜೇಸಿ ಕಮಲಪತ್ರ ಪ್ರಶಸ್ತಿ ಗೌರವಕ್ಕೆ ಘಟಕದ ಪೂರ್ವಧ್ಯಕ್ಷರಾದ ಜೇಸಿ ಅಶೋಕ್ ತೆಕ್ಕಟ್ಟೆ ಆಯ್ಕೆಯಾಗಿದ್ದಾರೆ.
2015 ರಲ್ಲಿ ಜೇಸಿಐ ಕುಂದಾಪುರಕ್ಕೆ ಸದಸ್ಯರಾಗಿ ಸೇರ್ಪಡೆಗೊಂಡು ಕಾರ್ಯಕ್ರಮಗಳ ನಿರ್ದೇಶಕರಾಗಿ , ಉಪಾಧ್ಯಕ್ಷರಾಗಿ 2019 ರಲ್ಲಿ ಘಟಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ವಲಯದ ಹಲವಾರು ಸಮ್ಮೇಳನದಲ್ಲಿ ಅತ್ಯುತ್ತಮ ಅಧ್ಯಕ್ಷ ಎನ್ನುವ ಪ್ರಶಸ್ತಿ ಹಾಗೂ ಮನ್ನಣೆ ಗೆ ಭಾಜನಾರಾಗಿದ್ದಾರೆ .
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ , ಹೆಸಕುತ್ತೂರು ಇಲ್ಲಿ ಕಳೆದ 22 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2015ರಲ್ಲಿ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ರೋಟರಿ ಸಂಸ್ಥೆಯಿಂದ ಎರಡು ಬಾರಿ ನೇಶನ್ ಬಿಲ್ಡರ್ ಪ್ರಶಸ್ತಿ ಗೆ ಭಾಜನಾರಾಗಿದ್ದಾರೆ.
ಇವರ ನೂರಕ್ಕೂ ಹೆಚ್ಚು ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವು ಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯನಿರ್ವಾಹಿಸಿದ್ದಾರೆ
ಜೇಸಿಐ ಕುಂದಾಪುರ ದ 2019 ನೇ ಸಾಲಿನ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಘಟಕವನ್ನು ಮುನ್ನಡೆಸಿದ ಇವರ ಅವಧಿಯಲ್ಲಿ ಜೇಸಿಐ ಕುಂದಾಪುರವು 100% Efficiency ಘಟಕವೆಂಬ ಹಿರಿಮೆಗೆ ಪಾತ್ರವಾಗಿತ್ತು. 2020 ರ ಜೇಸಿಐ ವಲಯ 15 ರ ತರಬೇತಿ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ Outstanding Zone Director ಗೌರವಕ್ಕೆ ಪಾತ್ರರಾಗಿದ್ದರು. ಸರ್ಕಾರಿ ಮತ್ತು ಖಾಸಗಿ ಶಾಲಾ ಶಿಕ್ಷಕರಿಗೆ , ಶಾಲಾ ಕಾಲೇಜುಗಳಿಗೆ 300ಕ್ಕೂ ಹೆಚ್ಚು ತರಬೇತಿಗಳಿಗೆ ರಾಜ್ಯಮಟ್ಟದ ಇಂಗ್ಲಿಷ್ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದು
300 ಕ್ಕೂ ಹೆಚ್ಚು ವೇದಿಕೆಗಳಲ್ಲಿ ವಿಶೇಷ ಸ್ಮರಣಶಕ್ತಿ ಪ್ರದರ್ಶನ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ನೀಡಿದ್ದಾರೆ
JCI ಪ್ರಮಾಣೀಕೃತ ವಲಯ ಮಟ್ಟದ ತರಬೇತುದಾರರು Soft Skills ತರಬೇತುದಾರರು ಬ್ರಿಟಿಷ್ ಕೌನ್ಸಿಲ್ ಪ್ರಮಾಣೀಕೃತ ಆಂಗ್ಲ ಭಾಷಾ ತರಬೇತುದಾರರು
Reserve Bank of India ದ ಆಹ್ವಾನದ ಮೇರೆಗೆ ಬೆಂಗಳೂರಿನ ಪೋಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ರಾಡಿಸನ್ ಬ್ಲೂ ಅಟ್ರಿಯ ಪಂಚತಾರಾ ಹೋಟೆಲ್ ನಲ್ಲಿ Reserve Bankof India, Bangalore ಆಯೋಜಿಸಿದ್ದ Financial Literary ಬಗ್ಗೆ ನಡೆದ ರಸಪ್ರಶ್ನೆಯ ಕ್ವಿಜ್ ಮಾಸ್ಟರ್ ಆಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.

RIESI ಬೆಂಗಳೂರು ಆಯೋಜಿಸಿದ್ದ ಅಂತಾರಾಷ್ಟ್ರೀಯ ಸೆಮಿನಾರ್‌ನಲ್ಲಿ ಇಂಗ್ಲಿಷ್ ಭಾಷಾ ಬೋಧನೆ ಕುರಿತು ಪ್ರಬಂಧ ಮಂಡಿಸಿದ್ದಾರೆ. ರಾಜ್ಯ ಮಟ್ಟದ ರೇಡಿಯೋ ಕಾರ್ಯಕ್ರಮಗಳಾದ ಚಿಣ್ಣರ ಚುಕ್ಕಿ ಮತ್ತು ಎಜುಸ್ಯಾಟ್ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. U ಚಾನೆಲ್, ಸ್ಪಂದನ ಚಾನೆಲ್ ಗಳಲ್ಲಿ ಸಂವಾದದಲ್ಲಿ ಹಾಗೂ ಸಂದರ್ಶನದಲ್ಲಿ ಭಾಗವಹಿಸಿದ್ದಾರೆ. ಸ್ರಜನಶೀಲ ಶಿಕ್ಷಕರಾಗಿ ವಿನೂತನ ಶೈಕ್ಷಣಿಕ ಪ್ರಯೋಗಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ತಮ್ಮ ಶಾಲೆಯು ರಾಜ್ಯಮಟ್ಟದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಎ ಶ್ರೇಣಿಯೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ.

ಮೊಗವೀರ ಯುವ ಸಂಘಟನೆ (ರಿ ) ಉಡುಪಿ ಜಿಲ್ಲೆ ಕೋಟೇಶ್ವರ ಘಟಕದ 2014-15 ನೇ ಸಾಲಿನ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ ಇವರು ಜಿಲ್ಲಾ ಮೊಗವೀರ ಯುವ ಸಂಘಟನೆಯ ಉಪಾಧ್ಯಕ್ಷರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಕೋಟೇಶ್ವರ ಹೋಬಳಿಯ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ಕುಂದಾಪುರ ತಾಲೂಕು ಸಾಹಿತ್ಯ ಪರಿಷತ್ ನ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ.

ಒಬ್ಬ ಕ್ರಿಯಾಶೀಲ ಶಿಕ್ಷಕ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ಕವಿ, ಸಾಹಿತಿ, ಚಿತ್ರ ಕಲಾವಿದ, ಗಾಯಕ, ರಂಗ ಕಲಾವಿದ, ಸಂಘಟಕ ಹೀಗೆ ಬಹು ಆಯಾಮಗಳಲ್ಲಿ ಗುರುತಿಸಿಕೊಂಡಿದ್ದಾರೆ. ಎಂದು ಜೇಸಿಐ ಕುಂದಾಪುರ ಅಧ್ಯಕ್ಷರಾದ ಜೇಸಿ ಚಂದನ್ ಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ

 

Related Articles

error: Content is protected !!