ಬೆಂಗಳೂರು : ಮಾಜಿ ಪ್ರಧಾನಿ, ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ವರ್ಷದ ಜನ್ಮದಿನದ ಸ್ಮರಣಾರ್ಥ ಹಾಗೂ ಸುಶಾಸನ ದಿನದ ಅಂಗವಾಗಿ ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಅಟಲ್ ಜೀ ಅವರ ಜೀವನ ಸಾಧನೆಯ ಕುರಿತಾದ ಪ್ರದರ್ಶಿನಿಯನ್ನು ಉದ್ಘಾಟಿಸಲಾಯಿತು
ದೇಶ ಕಂಡ ಅತ್ಯುತ್ತಮ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಸ್ಮರಣೆಯ ಸಂದರ್ಭದಲ್ಲಿ ಸದೃಢ ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಅವರ ಶ್ರೇಷ್ಠ ವ್ಯಕ್ತಿತ್ವವನ್ನು ದೇಶ ಸ್ಮರಿಸುತ್ತಿದೆ, ಅವರ ಆದರ್ಶಯುತ ಜೀವನ ಮತ್ತು ಸಾಧನೆಗಳು ದೇಶದ ಅಭಿವೃದ್ಧಿಯ ಪಥ ಮುನ್ನಡೆಯಲು ನಿತ್ಯ ನಿರಂತರ ಮಾರ್ಗದರ್ಶಿಯಾಗಿವೆ