Home » ಬಾಂಗ್ಲಾದಲ್ಲಿ 19 ಕ್ರಿಶ್ಚಿಯನ್‌ ಮನೆಗಳಿಗೆ ಬೆಂಕಿ
 

ಬಾಂಗ್ಲಾದಲ್ಲಿ 19 ಕ್ರಿಶ್ಚಿಯನ್‌ ಮನೆಗಳಿಗೆ ಬೆಂಕಿ

ಕ್ರಿಸ್ಮಸ್‌ ಆಚರಣೆ ವೇಳೆ ಪುಂಡರ ಕೃತ್ಯ

by Kundapur Xpress
Spread the love

ಢಾಕಾ : ಬಾಂಗ್ಲಾ ದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನದ ಬಳಿಕ ಅಲ್ಪಸಂಖ್ಯಾತರ ಮೇಲಿನ ದಾಳಿ ಹೆಚ್ಚುತ್ತಲೇ ಇವೆ. ಹಿಂದೂಗಳು ಹಾಗೂ ಹಿಂದೂ ದೇಗುಲಗಳ ಮೇಲಿನ ದಾಳಿ ಬಳಿಕ ಇದೀಗ ಚಿತ್ತಗಾಂಗ್ ಪ್ರದೇಶದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ ಮೇಲೆ ಕ್ರಿಶ್ಚಿಯನ್ ಸಮುದಾಯದವರ 19 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ಬಂದರ್ಬನ್ ಜಿಲ್ಲೆಯ ನೋಟುನ್ ತೊಂಗ್‌ಹಿರಿ ತ್ರಿಪುರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 17 ಮನೆಗಳು ಸಂಪೂರ್ಣ ಭಸ್ಮವಾಗಿದ್ದು, ಇನ್ನೆರಡು ಮನೆಗಳು ಭಾಗಶಃ ಸುಟ್ಟಿವೆ. ಆದರೆ ಬಾಂಗ್ಲಾ ಸರ್ಕಾರ ಮಾತ್ರ ಒಂದೇ ಸಮುದಾಯದ ಎರಡು ಗುಂಪುಗಳ ನಡುವಿನ ವೈಷಮ್ಯವೇ ಇದಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಿದೆ.

ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆಂದು ಚರ್ಚ್‌ಗೆ ಹೋಗಿದ್ದಾಗ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಮುದಾಯದ ಹಿರಿಯ ಮುಖಂಡನ ದೂರು ಆಧರಿಸಿ 6 ಮಂದಿ  ಕ್ರಿಶ್ಚಿಯನ್ ವಿರೋಧಿ ಗುಂಪಿನ ಸದಸ್ಯರು ಮತ್ತು ಬೆಂಗಾಲಿ ಮುಸ್ಲಿಂ ವ್ಯಕ್ತಿಯೊಬ್ಬನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Related Articles

error: Content is protected !!