ಕುಂದಾಪುರ : ತಾಲೂಕಿನ ಪ್ರತಿಷ್ಠಿತ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಸೊಸೈಟಿಯ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಖ್ ನಿರ್ದೇಶಕ ಎಂ.ಮಹೇಶ್ ಹೆಗ್ಡೆ ಮೊಳಹಳ್ಳಿ ಬಣ 12 ಸ್ಥಾನ ಗೆದ್ದುಕೊಂಡಿದ್ದು 1 ಸ್ಥಾನಕ್ಕೆ
ಅವಿರೋಧ ಆಯ್ಕೆ ನಡೆದಿದೆ ಒಟ್ಟಾರೆಯಾಗಿ 13 ಸ್ಥಾನಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ
ಸಾಮಾನ್ಯ ಕ್ಷೇತ್ರದಿಂದ ಎಂ.ಮಹೇಶ್ ಹೆಗ್ಡೆ, ಎಚ್.ಹರಿಪ್ರಸಾದ್ ಶೆಟ್ಟಿ, ಜಗನ್ನಾಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಲವಕರ ಶೆಟ್ಟಿ ಅನಿಲ್‌ಕುಮಾರ ಶೆಟ್ಟಿ ಇಂದಿರಾ ಯು. ಶೆಟ್ಟಿ ಮಹಿಳಾ ಮೀಸಲು ಕ್ಷೇತ್ರದಿಂದ ವಾಣಿ ಆರ್.ಶೆಟ್ಟಿ ಚೈತ್ರ ಉಡಪ,
ಹಿಂದುಳಿದ ವರ್ಗ ಆ ಕ್ಷೇತ್ರದಿಂದ ದಿನೇಶ ಮೊಗವೀರ, ಹಿಂದುಳಿದ ವರ್ಗ ಬಿ. ಕ್ಷೇತ್ರದಿಂದ ಉಮೇಶ್ ಶೆಟ್ಟಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಗಣೇಶ್ ಆಯ್ಕೆಯಾದರು. ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಕ್ಕೆ ಗಿರೀಶ್ ಅವಿರೋಧ ಆಯ್ಕೆಯಾದರು. ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಸುನಿಲ್‌ಕುಮಾರ್ ಚುನಾವಣೆ ನಡೆಸಿಕೊಟ್ಟರು