Home » ಕಟ್ಟಡ ಕಾರ್ಮಿಕರಿಗೆ ಕಿಟ್‌ ವಿತರಣೆ, ಸರ್ಕಾರದ ಸವಲತ್ತು ಒದಗಿಸಲು ಬದ್ಧ
 

ಕಟ್ಟಡ ಕಾರ್ಮಿಕರಿಗೆ ಕಿಟ್‌ ವಿತರಣೆ, ಸರ್ಕಾರದ ಸವಲತ್ತು ಒದಗಿಸಲು ಬದ್ಧ

ಗುರುರಾಜ್‌ ಗಂಟಿಹೊಳೆ

by Kundapur Xpress
Spread the love

ಬೈಂದೂರು :  ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ಬೈಂದೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯಿಂದ ಬೈಂದೂರು ತಾಲೂಕಿನ ಸುಮಾರು 08 ಮಂದಿ ಕಾರ್ಮಿಕರಿಗೆ ಟೈಲ್ಸ್ ಕಿಟ್ ಹಾಗೂ ವೆಲ್ಡರ್ ಕಿಟ್ ಮತ್ತು 12 ಮಹಿಳಾ ಕಾರ್ಮಿಕರಿಗೆ ಟೈಲರ್ ಕಾರ್ಡ್ ವಿತರಿಸಿದರು.

ಇಲಾಖೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಫಲಾನುಭವಿಗಳಿಗೆ ಕರೆ ನೀಡಿದ ಶಾಸಕರು, ಮುಂದಿನ ದಿನಗಳಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿದ ಹಾಗೂ ವಿವಿಧ ಕಾರ್ಮಿಕ ಸಲಕರಣೆಗೆ ಅರ್ಜಿ ಸಲ್ಲಿಸಿರುವವರಿಗೆ ಸರಕಾರದ ಸವಲತ್ತು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು .

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಸಂಚಾಲಕರಾದ ಶ್ರೀ ಮೋಹನ ಚಂದ್ರ ಉಪ್ಪುಂದ, ಅಧ್ಯಕ್ಷರಾದ ಸಂತೋಷ್ ಭಂಡಾರಿ, ಪದಾಧಿಕಾರಿಗಳು ಹಾಗೂ ಸಿಐಟಿಯು ಕಾರ್ಮಿಕ ಸಂಘಟನೆಯ ರಾಜೇಶ್ ರೋನಾಲ್ಡ್, ಸುರೇಶ್, ಬೈಂದೂರು ತಾಲೂಕು ಕಾರ್ಮಿಕ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಕಾರ್ಮಿಕ ಬಂಧುಗಳು ಉಪಸ್ಥಿತರಿದ್ದರು.

 

Related Articles

error: Content is protected !!