Home » ಪ್ರತಿಭಟನೆಗೆ ಮಣಿದ ಪೊಲೀಸ್‌ : ದೂರು ದಾಖಲು
 

ಪ್ರತಿಭಟನೆಗೆ ಮಣಿದ ಪೊಲೀಸ್‌ : ದೂರು ದಾಖಲು

by Kundapur Xpress
Spread the love

ಕಲಬುರಗಿ : ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸಚಿನ ಪಾಂಚಾಳ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿ ಕೊಂಡಿದ್ದು, ಡೆತ್‌ ನೋಟ್‌ ನಲ್ಲಿ ನನ್ನನ್ನೂ ಸೇರಿಕೊಂಡು ಬಿಜೆಪಿ ನಾಯಕರಿಗೆ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ದೂರು ನೀಡಲು ಠಾಣೆಗೆ ಹೋದಾಗ ಪಿಐ ಶಕೀಲ್ ಅಂಗಡಿ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಆರೋಪಿಸಿದರು.

ನಗರದ ಜಗತ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್‌ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ದಲಿತ ಶಾಸಕನಿಗೆ ಕನಿಷ್ಠ ಗೌರವ ನೀಡಿಲ್ಲ. ಇದು ಕೇವಲ ನನಗೆ ಮಾಡಿದ ಅವಮಾನವಲ್ಲ ಇಡೀ ಗ್ರಾಮೀಣ ಕ್ಷೇತ್ರದ ಮತದಾರರು ಹಾಗೂ ಸಮಸ್ತ ಬಿಜೆಪಿ ಕಾರ್ಯಕರ್ತರಿಗೆ ಮಾಡಿದ ಅವಮಾನವಾಗಿದೆ. ಪ್ರತಿ ಹತ್ತು ನಿಮಿಷಕೊಮ್ಮೆ ಹೊರ ಹೋಗಿ ನಿರ್ದೇಶನ ತೆಗೆದುಕೊಂಡು ಬಂದು ನಮಗೆ ಅವಮಾನ ಮಾಡಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಮಾತನಾಡಿದರು. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ, ಮಹಾದೇವ ಬೆಳಮಗಿ, ಉಮೇಶ್ ಪಾಟೀಲ್, ಗಂಗಪ್ಪಗೌಡ ಪಾಟೀಲ್, ವಿಶಾಲ ದರ್ಗಿ, ಭಾಗೀರಥಿ ಗುನ್ನಾಪುರ, ಅಪ್ಪು ಕಣಕಿ, ಶಿವಕಾಂತ್ ಮಹಾಜನ್, ರಾಮಚಂದ್ರ ಜಾಧವ್, ರಾಜು ದೇವದುರ್ಗ, ಸುಶೀಲ ಚವ್ಹಾಣ, ಸಂತೋಷ್ ಹಾದಿಮನಿ, ಶಿವ ಅಷ್ಟಗಿ, ಶ್ರೀಧ‌ರ್ ಚವ್ಹಾಣ, ಗೋಪಾಲ್ ಚವ್ಹಾಣ ಇದ್ದರು.

 

Related Articles

error: Content is protected !!