ಹುಬ್ಬಳ್ಳಿ : ಮಹಜರು ಮಾಡಲು ಕರೆದುಕೊಂಡು ಹೋದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇನ್ ಸ್ಪೆಕ್ಟರ್ ಓರ್ವಸಿಬ್ಬಂದಿಗೆ ಗಾಯವಾಗಿದೆ. ಆರೋಪಿ ಹಾಗೂ ಗಾಯಾಳು ಪೊಲೀಸರನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಳೇ ಹುಬ್ಬಳ್ಳಿ ಘೋಡಕೆ ಪ್ಲಾಟ್‌ನ ನಿವಾಸಿ ಮುಜಮಿಲ್ ಗಮಿ (28) ಆರೋಪಿ.
ಈತ ಘೋಡಕೆ ಪ್ಲಾಟ್ ನಿವಾಸಿ, ಆತನ ಚಿಕ್ಕಪ್ಪಂದಿರಾದ ಜಾವೀದ್ ಶೇಖ್, ಸಮೀರ್ ಶೇಖ್‌ಗೆ ಹಳೇ ವೈಷಮ್ಯ ಹೊಂದಿದ್ದ ಸೋಮವಾರ ರಾತ್ರಿ ಜಗಳ ತೆಗೆದು ತನ್ನ ಸಹಚರರೊಂದಿಗೆ ಸೇರಿಕೊಂಡು ಚಾಕುವಿನಿಂದ ಇರಿದಿದ್ದ. ಅಲ್ಲದೇ ಜೀವ ಬೆದರಿಕೆ ಹಾಕಿದ್ದ. ಬಳಿಕ ಹೊರವಲಯಕ್ಕೆ ತೆರಳಿ ಚಾಕು ತೋರಿಸಿ ವಾಹನ ನಿಲ್ಲಿಸಿ ದರೋಡೆ ಕೊಡ ಮಾಡಿದ್ದ. ಈತನನ್ನು ಸೋಮವಾರವೇ ಪೊಲೀಸರು ಬಂಧಿಸಿದ್ದರು. ಮಂಗಳವಾರ ಬೆಳಗ್ಗೆ ಮಹಜರು ಮಾಡಲು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಅನಿವಾರ್ಯವಾಗಿ ಪೊಲೀಸರು ಗುಂಡು ಹೊಡೆದಿದ್ದಾರೆ