ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ವಿಶ್ವಗೀತಾ ಪರ್ಯಾಯ ಮಹೋತ್ಸವದ ಅಂಗವಾಗಿ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮ ತ್ರಿಶತಾಬ್ದಿ ಮಹೋತ್ಸವದ ಪ್ರಯುಕ್ತ ರಾಜಾಂಗಣದಲ್ಲಿ ಆಯೋಜಿಸಿದ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನವನಿತ್ತರು.
ಸುಮಾರು 250 ವರ್ಷಗಳ ಹಿಂದೆ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರು ಸ್ವತಃ ನೇತೃತ್ವ ವಹಿಸಿ ಮಹಿಳಾ ಸ್ವಾವಲಂಬನೆಯ ದೂರದೃಷ್ಟಿಯಿಂದ ನೇಕಾರ ಮಹಿಳೆಯರನ್ನು ಒಗ್ಗೂಡಿಸಿ ತಯಾರಿಸಿದ ಮಹೇಶ್ವರಿ ಸೀರೆಗಳು ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಪ್ರಮುಖ ಆಕರ್ಷಣೆಯಾಗಿತ್ತು
ಸಮಾರಂಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಹೋಳ್ಕರ್ ಜನ್ಮ ತ್ರಿಶತಾಬ್ದಿ ಆಚರಣೆ ಸಮಿತಿಯ ರಾಜ್ಯ ಸದಸ್ಯೆ ಕೆಎಂಸಿ ಮಕ್ಕಳ ತಜ್ಞೆ ಡಾ! ಪುಷ್ಪಾ ಕಿಣಿ, ಯೋಗ ವಿಭಾಗದ ಮುಖ್ಯಸ್ಥೆ ಅನ್ನಪೂರ್ಣ ಆಚಾರ್ಯ, ಖ್ಯಾತ ಗಾಯಕಿ ಕಲಾವತಿ ದಯಾನಂದ, ಹೋಳ್ಕರ್ ಜನ್ಮ ತ್ರಿಶತಾಬ್ದಿ ಆಚರಣಾ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕಿ ಲಕ್ಷ್ಮೀ ಹೆಬ್ಬಾರ್, ಸದಸ್ಯರಾದ ರೇಶ್ಮಾ ಉದಯ ಶೆಟ್ಡಿ, ಶಿಲ್ಪಾ ಜಿ. ಸುವರ್ಣ, ಶಿಲ್ಪಾ ಜೋಶಿ, ಪದ್ಮಶಾಲಿ ನೇಕಾರ ಪ್ರತಿಷ್ಠಾನ(ರಿ.) ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ(ನಿ.) ಅಧ್ಯಕ್ಷ ರತ್ನಾಕರ್ ಇಂದ್ರಾಳಿ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ(ರಿ.) ಮಂಗಳೂರು ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಬಾರ್ಕೂರು ಆಡಳಿತ ಮೊಕ್ತೇಸರ ಡಾ! ಜಯರಾಮ್ ಶೆಟ್ಟಿಗಾರ್, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಧಾರ್ಮಿಕ ವೇದಿಕೆ ಸಂಚಾಲಕ ಪುರುಷೋತ್ತಮ್ ಶೆಟ್ಟಿಗಾರ್, ಪ್ರಮುಖರಾದ ಡಾ! ಶಿವಪ್ರಸಾದ್ ಶೆಟ್ಟಿಗಾರ್ ಕಾರ್ಕಳ, ಅಶೋಕ್ ಶೆಟ್ಟಿಗಾರ್ ರಾಂಪುರ, ದೀಪಕ್ ಕುಮಾರ್ ಕಿನಿಮುಲ್ಕಿ, ಅನುರಾಧ ಉದಯ್, ರಾಜಕೇಸರಿ, ಬಾಲಕೃಷ್ಣ ಶೆಟ್ಟಿಗಾರ್, ಸುರೇಶ್ ಶೆಟ್ಟಿಗಾರ್ ದೊಡ್ಡಣಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.