Home » ಬಿಎಸ್‌ಎಫ್‌ನ್ನು ರಾಜಕೀಯಕ್ಕೆ ಎಳೆದ ಮಮತಾ ಬ್ಯಾನರ್ಜಿ
 

ಬಿಎಸ್‌ಎಫ್‌ನ್ನು ರಾಜಕೀಯಕ್ಕೆ ಎಳೆದ ಮಮತಾ ಬ್ಯಾನರ್ಜಿ

by Kundapur Xpress
Spread the love

ಹೊಸದಿಲ್ಲಿ : ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಾಂಗ್ಲಾದೇಶದಿಂದ ನುಸುಳುಕೋರರನ್ನು ಭಾರತಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪ ಮಾಡಿದ್ದಾರೆ. ಈ ಮೂಲಕ ಬಿಎಸ್ಎಫ್ ಅನ್ನು ಕೂಡ ತಮ್ಮ ರಾಜಕೀಯ ದುರಾಸೆಗಾಗಿ ಬಳಸಿಕೊಂಡಿದ್ದಾರೆ.

ದೇಶ ಕಾಯುವ ಯೋಧರ ಮೇಲೆ ಈ ರೀತಿ ಆರೋಪ ಮಾಡುತ್ತಿರುವುದು ದೇಶದ್ಯಾದಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.ಬಿಎಸ್‌ಎಫ್ ರಾಜ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದಿರುವ ಅವರು, ಬಿಎಸ್‌ಎಫ್‌ನ ಈ ವರ್ತನೆಯ ಹಿಂದೆ ಕೇಂದ್ರ ಸರ್ಕಾರದ ನೀಲನಕ್ಷೆ ಇದೆ ಎಂದು ದೂರಿದ್ದಾರೆ. ಇಸ್ಲಾಂಪುರ, ಸಿತಾಯಿ, ಚೋಪ್ರಾ ಮತ್ತು ಇತರ ಹಲವಾರು ಗಡಿ ಪ್ರದೇಶಗಳ ಮೂಲಕ ಒಳನುಸುಳುವವರನ್ನು ಭಾರತಕ್ಕೆ ಪ್ರವೇಶಿಸಲು ಬಿಎಸ್‌ಎಫ್ ಅನುಮತಿಸುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ.

ಬಿಎಸ್‌ಎಫ್ ಜನರನ್ನು ಹಿಂಸಿಸುತ್ತಿದೆ ಮತ್ತು ರಾಜ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ರಾಜ್ಯ ಸಚಿ ವಾಲಯದಲ್ಲಿ ನಡೆದ ಆಡಳಿತ ಪರಿಶೀಲನಾ ಸಭೆಯಲ್ಲಿ ಆರೋಪಿಸಿದರು. ಇದರ ಹಿಂದೆ ಕೇಂದ್ರ ಸರ್ಕಾರದ ನೀಲನಕ್ಷೆ ಇದೆ. ಆದರೆ ಗೂಂಡಾಗಳು ಭಾರತಕ್ಕೆ ಪ್ರವೇಶಿಸುತ್ತಿದ್ದಾರೆ ಎಂದಿದ್ದಾರೆ.

 

Related Articles

error: Content is protected !!