ಕುಂದಾಪುರ : ಕುಂಭಾಸಿ ಜನತಾ ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಶೆಕ್ಕಟ್ಟಿ ಗ್ರಾಮದ ಕೃಷ್ಣ ಎಂಬವವರು ಮನೆಯ ಕೋಣೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಮಾರು ಒಂದೂವರೆ ವರ್ಷದಿಂದ ಕುಂಭಾಶಿ ಕಾಲೋನಿಯಲ್ಲಿ ಪತ್ತಿ ಮತ್ತು ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದ ಕೃಷ್ಣ ಬೈಕ್ ಅಪಘಾತದಲ್ಲಿ ಬಲಗಾಲಿಗೆ ಮೂಳೆ ಮುರಿತದ ಗಾಯವಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದರು ಗುರುವಾರ ಬೆಳಿಗ್ಗೆ ಕೃಷ್ಣರವರ ಪತ್ನಿ ಸುಶೀಲ ಮಗಳನ್ನು ಶಾಲೆಗೆ ಬಿಡಲು ಹೋಗಿ ವಾಪಾಸ್ಸು ಮನೆಗೆ ಬಂದಾಗ ಕೃಷ್ಣ ಅವರು ಮನೆಯ ಕೋಣೆಯಲ್ಲಿ ಕುತ್ತಿಗೆಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.